ಕಮಲ ’ಸಂಭವ’

ಕಮಲ ’ಸಂಭವ’

ಬರಹ

ಸಮುದ್ರ ಭೊಗ೯ರೆಯುತ್ತಿತ್ತು, ಆಕಾಶ ಕಪ್ಪಾದ ಮೋಡದಿಂದ ಕೂಡಿತ್ತು. ಪ್ರಾಣಿ ಪಕ್ಷಿ ಸಂಕುಲ
ಹೆದರಿ ತಮ್ಮ ಸ್ಥಾನದಲ್ಲಿತ್ತು.ಸಮುದ್ರ ಮಧ್ಯದಲ್ಲಿ ಸುಂದರ ದ್ವೀಪ ’ಗರುಡಧ್ವಜ’ ಕಮಲಾಕ್ಷಸರರಿಂದ
ಕೂಡಿತ್ತು. ಇತ್ತ ಗರುಡಧ್ವಜವನ್ನು ಆಕ್ರಮಣ ಮಾಡುವ ಉದ್ದೇಶ ’ಹಸ್ತ’ನಾಪುರ ಮತ್ತು
’ಮದ’ನಾರಿ ರಾಜ್ಯಗಳು ಸಂಚುನಡೆಸುತ್ತಿತ್ತು. ತಮ್ಮ ತಮ್ಮ ರಾಜ್ಯದ ಮುಖ್ಯ ನಾಯಕರನ್ನು ಕೆಲವು
ಅಮಿಶ ಒಡ್ದಿ, ಕಮಲಾಕ್ಷಸರು ಅವರನ್ನು ಅಪಹರಣ ಮಾಡಿದ್ದರು. ಹಿಂದೆ ಕಡು ವೈರಿಗಳಾಗಿದ್ದ ಹಸ್ತನಾಪುರ
ಮದನಾರಿ ಈಗ ಒಂದಾಗಿದ್ದರು, ಅವರ ಉದ್ದೇಶ್ಯ ಕಮಲಾಕ್ಷಸರ ಸವ೯ನಾಶ.

ಸಾವಿರಾರು ಯೋಜನೆಗಳ ವಿಸ್ತೀರಣ೯ ಉಳ್ಳ ಶರಧಿಯನ್ನು ಧಿಕ್ಕರಿಸಿ ಹಾರ ಬಲ್ಲ ಶೂರನಿಗಾಗಿ ಹುಡುಕಾಟ
ನಡೆದಿತ್ತು. ಭಲ್ಲೂಕ ವೀರ ನಾದ 'ವರೇಣ್ಯ' ಸಭೆಯನ್ನು ಉದ್ದೇಶಿಸಿ ಮಾತಾಡಲು ಪ್ರಾರಂಭಿಸಿದನು.

 

ವರೇಣ್ಯ: ಜನಾದೇಶ ಪಡೆದ ನಾಯಕರೆ, ಕುಬೇರನ ಅಳಕಾಪುರಿಯನ್ನು ನಾಚಿಸುವ ಸೌಧಗಳ’ಓಡೆಯರೆ’,

           ಸ್ರೀಕಲಾ ಪೊಷಕರೆ,ರಸಿಕರೆ, ಅಲ್ಪಾಂಕದಿಂದ ತೇಗ೯ಡೆಯಾದ ಬುದ್ಧಿವಂತರೆ. ಈ ದಿನ ನಮ್ಮಕೆಲವು  
           ದಂಡನಾಯಕರನ್ನು ಕಮಲಾಕ್ಷಸರು ಅಪಹರಣ ಮಾಡಿ ಗರುಡಧ್ವಜ ದ್ವೀಪದಲ್ಲಿ ಬಂಧಿಸಿದ್ದಾರೆ.
           ನಮ್ಮವರ ಮನ:ಪರಿವತ೯ನೆ ಮಾಡುವ ಉದ್ದೇಶ ಅವರದು, ನಮ್ಮ ತೋಳ್ಬಲ ಕುಗ್ಗಲಿ ಎಂಬ ಆಸೆ.
           ಈ ಮನ:ಪರಿವತ೯ನಾ ಕ್ರಿಯೆಯನ್ನು 'ಕಮಲಾಶಸ್ತ್ರ' ಎನ್ನುತ್ತಾರೆ. ನಮ್ಮವರ ಕ್ಷೇಮದ ಬಗ್ಗೆ ನಮಗೆ

           ಚಿಂತೆಯಾಗಿದೆ.ನಮ್ಮಲ್ಲಿ ಯಾರದರು ಶೂರರು ಈ ಶರಧಿಯನ್ನು ದಾಟಿ ನಮ್ಮವರ ಕ್ಷೇಮದ ಬಗ್ಗೆ ವಿಚಾರ ತಂದಲ್ಲಿ,

           ನಾವು ರಾಜ್ಯಾಕ್ರಮಣಾ ಆದನಂತರ ಮಂತ್ರಿಪದವಿಯಂ ಕೊಡುತ್ತೆವೆ ಎಂದು ಘೋಶಿಸುತೇನೆ.

ಎನ್ನುತಿದ್ದ ಹಾಗೆ ವರೇಣ್ಯನ ಶಿರದಮೇಲೆ ಅವನ ತಮ್ಮ ಕುಮಾರ ಪ್ರಹಾರ ಮಾಡುತ್ತಾನೆ.

ಕುಮಾರ: ತಂದೆಯವರ ಅನು’ಮತಿ’ ಇಲ್ಲದೆ ಅಶ್ವಾಸನೆ ಕೊಡಕೂಡದು,ಮಂತ್ರಿ ಸ್ಥಾನ ಕೇವಲ ’ದೇವೇ’ಂದ್ರನ ನಿಧಾ೯ರ.

ಪಾಂಡೆದೇಶದ ರಾಜ: ನಿಮ್ಮ ವಂಶದವರು ನಿಶ್‌ಪ್ರಯೊಜಕರು,ಅಲ್ಪ ಮತಿಯವರು ನಿಮ್ಮ ನಿಣ೯ಯ ಇಲ್ಲಿ

                         ನಡೆಯದು, ನೀವು ಕ್ಷೀರೊತ್ಪನ್ನ ಘಟಕದ ಅಧ್ಯಕ್ಷ್ಯರಾಗಿದ್ದಾಗ ನೀರಿಗೆ ಹಾಲನ್ನು ಬೆರೆಸಿದವರಲ್ಲವೆ,

                         ನಿಮ್ಮ ಸಹೋದರ ವಚನಭ್ರಷ್ಟ ಅಗಿದ್ದರಿಂದಲೇ ಕಮಲಾಕ್ಷಸರು ಅಸ್ತಿತ್ವಕ್ಕೆ ಬಂದಿದ್ದು.

ಕುಮಾರ: ’ದೇವೇ’ಂದ್ರನ ವಂಶದಬಗ್ಗೆ ಇನ್ನೊಂದು ಮಾತನಾಡಿದಲ್ಲಿ ಶಿರಶ್ ಛ್ಛೇದನ!

ಧಮ೯ಸಿಂಹ: ಶಾಂತಿ, ಶಾಂತಿ ನಿಮ್ಮ ಪುಜ್ಯ ತಂದೆಯವರು ನಿದ್ರೆಯಿಂದ ಎದ್ದುಬಿಡುವರು,ಶಾಂತ ಚಿತ್ತರಾಗಿ. ’ರಾಧ’ರಮಣ

               ನಿನ್ನ ಅಗ್ರಜ ಮಾತನಾಡಲು ಬಿಡು.


ಈಶಪುತ್ರ: ನನಗೆ ತಿಳಿದಿರುವಂತೆ ಈ ಶರಿಧಿಯನ್ನು ದಾಟಲು ಎಕ’ಮೇವ’ಅದ್ವೀಯನಾಗಿರುವ, ನಮ್ಮ ಎರಡು ರಾಜ್ಯದ

             ಸೇವೆಯನ್ನು ಮಾಡಿರುವ, ಕಮಲಾಕ್ಷಸರ ದಪ೯ ದಮನ ಮಾಡುವ, ಅವರ ಜ್ಯೊತೆ ’ಧಮ೯’ಯುಧ್ದಮಾಡುವ ಎಕೈಕ

             ಮಾನವ ’ಈ ಬ್ರಾಂ ಹ್ರೀಂ’. ಇವನ ಇನ್ನೊಂದು ಹೆಸರು ’ಬೀಜಾಕ್ಷರ’ ಎಂದು, ಇವನೂಬ್ಬನೆ ಶೂರ!

ಈ ಬ್ರಾಂ ಹ್ರೀಂ: ನನ್ನಿಂದ ಈ ಕೆಲಸ ಸಾಧ್ಯವಾಗುವುದೆ ? ಇಲ್ಲ ನನಲ್ಲಿ ಅಂತಹ ಶಕ್ತಿ ಇಲ್ಲ.

ಧಮ೯ಸಿಂಹ: ಬೀಜಾಕ್ಷರ! ನೀನು ’ಹಸ್ತ’ನಾಪುರಕ್ಕೆ ಬರುವ ಮುಂಚೆ, ’ದೇವೇ’ಂದ್ರನಿಂದ ಶಾಪಗ್ರಸ್ಥನಾಗಿದ್ದೆ.
                 ಸಿಧ್ದರಾಮರು ನಿನ್ನ ಶಾಪವನ್ನು ವಿಮೋಚನೆ ಮಾಡಿದ್ದಾರೆ. ಹೆದರಬೇಡ ಅಗ್ನಿಪವ೯ತದ ಸ್ಫೋಟವಾಗಲಿ,'

                 ಆಕಾಶದಿಂದ ಬೀಳುವ ಉಲ್ಕೆಗಳಾಗಲಿ, ಕಮಲಾಕ್ಷಸರ ಭೂ’ಗಣ’ಗಳಾಗಲಿ ನಿನ್ನನ್ನು ಸ್ಪಷಿ೯ಸಲು

                 ಸಾಧ್ಯವಾಗದು, ನಿನ್ನ ಸ್ವಾಮಿ ನಿಷ್ಥೆ ನಿನ್ನನು ಕಾಪಾಡುವುದು.

 ಈ ಬ್ರಾಂ ಹ್ರೀಂ: ಎರಡು ರಾಜ್ಯಗಳ ಅರಸುಗಳ ಮೇಲಾಣೆ. ಸಮುದ್ರವು ಉಕ್ಕಲಿ, ಕಾಮೋ೯ಡ ಮಳೆ ಸುರಿಸಲಿ, ಮಿಂಚು

                    ಸಿಡಿಲುಗಳು ಬಡೆಯಲಿ,ಸೂಯ೯ಚಂದ್ರರು ಅವರವ ಪಥಗಳನ್ನು ಬದಲಿಸಲಿ, ನಾನು ಯಾವುದಿಕ್ಕು

                    ಮಣಿಯುವುದಿಲ್ಲ. ನನ್ನ ಸ್ವಾಮಿ  ನಿಷ್ಥೆ ಆ ಚಂದ್ರಾಕ೯.

ಇತ್ತ ಮತ್ಸ್ಯಲೋಕದಲ್ಲಿ
ಮರೀಚಿಕ ಮತ್ಸ್ಯಲೋಕದ ಒಡೆಯ ತನ್ನ ಬಂಧುಮಿತ್ರರರ್ರನ್ನು ಒದ್ದೇಶಿಸಿ ಮಾತನಾಡುತ್ತಾನೆ.
ಮರೀಚಿಕ: ಬಂಧುಗಳೆ ಈ ದಿನ ಬಹಳಾ ದುದಿ೯ನ, ನಮ್ಮ ಕುಲದೇವರು ನನ್ನ ಸ್ವಪ್ನದಲ್ಲಿ ಬಂದು ಒಬ್ಬ ಪಾಪಿಯ ನೆರಳು

             ಸಮುದ್ರದ ಮೇಲೆ ಬಿಳುತ್ತಿದ್ದಂತೆಯೆ ಜಲಚರಗಳು ಸಾಯುವುದು ಎಂದು ಹೇಳಿದಂತಾಯಿತು, ಮಿತ್ರರೆ ನೀವು 

             ನಿಮ್ಮ ಪ್ರಾಣವನ್ನು ಕಾಪಾಡಿಕೊಳ್ಳಿ.

 ಈ ಬ್ರಾಂ ಹ್ರೀಂ ವಾಯುವೇಗದಲ್ಲಿ ಹಾರಿದ, ಸಮುದ್ರ ಮೇಲೆ ತನ್ನ ನೆರಳು ಬೀಳುತಿದ್ದಂತೆಯೆ, ಕೆಲವು ಜಲಚರಗಳು ನಿಜೀ೯ವವಾಯಿತು. ತಿಮಿಂಗಳಗಳು, ಬಡಬಾಗ್ನಿಗಳನ್ನೆ ನುಂಗುವ ನಮ್ಮನ್ನೆ ಹೆದರಿಸುವ ಈ ಪಾಪಿ ಯಾರಿರಬಹುದೆಂದು ವಿಸ್ಮಯಗೊಂಡವು.

ಬೀಜಾಕ್ಷರ ಗರುಡಧ್ವಜ ದ್ವೀಪವನ್ನು ತಲುಪುತ್ತಾನೆ. ಆಕಾಶದೆತ್ತರದ ವಜ್ರಕೋಟೆಯನ್ನು ನೋಡಿ ,ಹೇಗೆ ಭೇದಿಸಲಿ ?
ಎಂದು ಯೋಚಿಸಿತ್ತಿರುವಾಗ. ಸವಾ೯ಭರಣ ಭೂಶಿತಳು,ಶಶಿಕಾಂತೆ,ಕತ್ತಲಿನಲ್ಲೂ ’ಶೋಭಾ’ಯಮಾನವಾಗಿ
ಹೊಳೆಯುತ್ತಿರುವ ಸ್ರೀಯನ್ನು ಕಾಣುತ್ತಾನೆ.

ಸುಂದರಿ ನೀರೇ ! ನೀನಾರು ನಿನೇಕೆ ಈ ವಜ್ರ ಕೋಟೆಯನ್ನು ಕಾಯುತ್ತಿರುವೆ? ನಿಮ್ಮ ರಾಜ್ಯದಲ್ಲಿ ಪುರುಷರು ನಪುಂಸಕರೆ? ಒಂದು ಸ್ರೀಯನ್ನು ದ್ವಾರಪಾಲಕಿಯಾಗಲು ಬಿಟ್ಟಿರುವರಲ್ಲ!

ಸ್ರೀ: ಆಗಂತುಕಾ ! ನಾನು ಸ್ವಾಮಿನಿಷ್ಥಳು, ನನ್ನ ಸ್ವಾಮಿಯ ಸ್ಥಾನವನ್ನು ಉಳಿಸಲು ಹಾಗೂ ಭೂ’ಗಣ’ಗಳ ಶಾಪದಿಂದ 

      ನಾನಿಲ್ಲಿರುವೆನು. ಅದಿರಲಿ ನೀನಾರು, ಇಲ್ಲಿಗೇಕೆ ಬಂದಿರುವೆ. ನನ್ನ ಅಪ್ಪಣೆ ಇಲ್ಲದೆ ಒಂದು ಕ್ರಿಮಿಯು ಒಳಗಡೆ ಹೋಗಲು

      ಸಾಧ್ಯವಿಲ್ಲ. ನೀನು ಒಂದು ಪಕ್ಷ ಹೊಗಬೇಕಾದಲ್ಲಿ ನನ್ನೊಡನೆ ಯುಧ್ಧಮಾಡಬೇಕು. ನಾನು ಸೋತರೆ ! ನಿನಗೆ

      ದ್ವಾರಪ್ರವೇಶ.

ಬೀಜಾಕ್ಷರನ ಪೄಷ್ಥದಿಂದ ವೀಷಪೂರಿತ ಅನಿಲ ಸೋರುತ್ತದೆ, ಇದರಿಂದ ದ್ವಾರಪಾಲಕಿ ಮೂಛಿ೯ತಳಾಗುತಾಳೆ.
ಬೀಜಾಕ್ಷರ ದ್ವಾರವನ್ನು ಪ್ರವೇಶಿಸುತ್ತಾನೆ.

ಗರುಡಧ್ವಜ ವಣ೯ನೆ

ಗರುಡಧ್ವಜ ಒಂದು ಸುಂದರ ದ್ವೀಪ, ಮನೋಹರವಾದ ಉದ್ಯಾನವನಗಳು,ರಾಜಮಾಗ೯ಗಳಿಂದ ಕೂಡಿರುತ್ತದೆ,ಎಲ್ಲಿ ನೋಡಿದರು ಬಂಗಾರ, ವಜ್ರ,ವೈಢುರ್ಯ,ಮಾಣಿಕ್ಯ ಮುಂತಾದ ಅಪರೂಪ ವಸ್ತುಗಳಿಂದ ಮಾಡಲ್ಪಟ್ಟ ಗೊಡೆಗಳು,

ಅರಮನೆಗಳು. ಪ್ರತಿ ಮನೆಗಳಲ್ಲಿ ಅಪ್ಸರೇಯರು,ಮಧು ಹಂಚುವ ಸ್ರೀಯರು, ಅಂಗ ಮದ೯ನ ಕೇಂದ್ರಗಳು.

ಎಲ್ಲಿ ನೋಡಿದರೂ, ಭೂಗಭ೯ದಿಂದ ಬಂಗಾರವನ್ನು ತಗೆಯುವ ಯಂತ್ರಗಳು. ಕಮಲಾಕ್ಷಸರ ದೊರೆ ಶಿಕಾರೇಶ್ವರ.

ಈತ ಸ್ವಜನ ಪ್ರೇಮಿ, ಲೋಭಿ ಮತ್ತು ಸ್ವಾರ್ಥಿ. ಇವನು ಹೆಸರಿಗೆ ರಾಜನಾಗಿದ್ದು, ಆಡಳಿತ ನಿಣ೯ಯ ಮಾತ್ರ ಭೂ’ಗಣಗಳದ್ದು ಅಗಿರುತ್ತದೆ.

(ಮುಂದುವರೆಯುವುದು)