ಕರಡಿಯನಾಡಿಸುವವಳ ಕಥೆ...

ಕರಡಿಯನಾಡಿಸುವವಳ ಕಥೆ...

ಕವನ

ಒಂದು ಚೆಂದ ಕುಣಿತದಾ ಕರಡಿಯಿತ್ತು

ಮುದ್ದು ಮುದ್ದಾಗಿ ಅದು ಕುಣಿಯುತ್ತಿತ್ತು

ಹೆಂಗಸೊಬ್ಬಳು ಅದನು ಆಡಿಸುತಿರಲು

ಕುಟುಂಬ ಪೋಷಣೆಯ ನಡೆಸುತಿರಲು

 

ಆಕೆ ಹೇಳಿದಂತೇ ಅದು ಕುಣಿಯುತ್ತಿತ್ತು

ಊರ ಮಂದಿಯನೆಲ್ಲಾ ನಲಿನಲಿಸುತ್ತಿತ್ತು

ಅವಳ ಸಂಸಾರ ತಿಂದು ತಣಿಯುತ್ತಿತ್ತು

ಅದು ಮಾತ್ರ ಹಸಿವಿನಿಂದ ಬಳಲುತ್ತಿತ್ತು

 

ದಿನವೂ ಅದರ ಬಿರು ಕೂದಲುಗಳ ಕಿತ್ತು

ಮಾನಿನಿ ಮಾರುತಿದ್ದಳಲ್ಲ ಹಣದ ಆಸೆಗೆ

ದಿನ ದಿನವೂ ಅವಳ ಆ ದರ್ಪ ಹೆಚ್ಚಲು

ಊಟವಿಲ್ಲದ ಕರಡಿ ಸೋತು ಸೊರಗಲು

 

ಹಸಿವಿನಿಂದ ಬಳಲಿ ಕುಣಿಯದ ಕರಡಿಯ

ಬೆನ್ನಿಗೆ ಬಿಗಿದಳೊಂದು ಬಿರು ಏಟ ಬೈಯುತೆ

ಅವಳ ದರ್ಪಕೆ ತಾಳ್ಮೇ ಕಳೆದಾ ಕರಡಿಯು

ಉಗುರಿನಿಂದಾ ಅವಳ ತಲೆಯನೇ ಸೀಳಿತೇ!

 - ಕೆ ನಟರಾಜ್, ಬೆಂಗಳೂರು
ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ

ಚಿತ್ರ್