*ಕರಿಬೇವಿನ ಆರೋಗ್ಯಕರ ಉಪಯೋಗಗಳು.*

*ಕರಿಬೇವಿನ ಆರೋಗ್ಯಕರ ಉಪಯೋಗಗಳು.*

ಕರಿಬೇವು ಈ ಹೆಸರಿನಲ್ಲಿಯೇ ಒಂದು ಘಮವಿದೆ. ಅಡುಗೆ ರುಚಿ ಹೆಚ್ಚಾಗಬೇಕಾದರೆ ಕರಿಬೇವು ಬೇಕೇ ಬೇಕು. ದಕ್ಷಿಣ ಭಾರತದ ಕಡೆಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ನಾನಾ ಔಷಧಿಗಳಲ್ಲಿ ಬಳಸುತ್ತಾರೆ. ಬರೀ ಅಡಿಗೆಯೊಂದೇ ಅಲ್ಲದೆ ನಮ್ಮ ಆರೋಗ್ಯದ ಸಮಸ್ಯೆಗಳಿಗೂ ಇದು ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪ್ರೊಟೀನ್, ಫೈಬರ್, ಮಿಲರ್ ವಿಟಮಿನ್ಸ್ ಹೀಗೆ ಅನೇಕ ರೀತಿಯ ಅಂಶಗಳು ಅಡಗಿವೆ.

1) ಕರಿಬೇವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದರ ರಸವನ್ನು ತೆಗೆದು ಅದಕ್ಕೆ ಒಂದು ಕಪ್ ನೀರು ಬೆರೆಸಿಕೊಂಡು ಕುಡಿಯುವುದರಿಂದ ಕಿಡ್ನಿಯಲ್ಲಿ ಬೆಳೆಯುವ ಕಲ್ಲಿನಿಂದ ಮುಕ್ತಿ ಪಡೆಯಬಹುದು.

2) ಜೀರ್ಣಶಕ್ತಿ ವೃದ್ಧಿಯಾಗಬೇಕಾದಲ್ಲಿ ಕರಿಬೇವನ್ನು ಸೇವಿಸುವುದು ಒಳ್ಳೆಯದು. ಇದರೊಂದಿಗೆ ನಾಲ್ಕು ಕಾಳು ಓಂ ಸೇರಿಸಿ ಸೇವಿಸಿದರೆ ಮತ್ತೂ ಒಳ್ಳೆಯದು. ಜೀರ್ಣ ಶಕ್ತಿ ವೃದ್ಧಿಯಾಗುತ್ತದೆ.

3) ಕರಿಬೇವಿನಲ್ಲಿ ಕಬ್ಬಿಣ ಅಂಶವಿದೆ. ಇದು ಗರ್ಭಿಣಿಯವರಿಗೆ ಮತ್ತು ಹೆಣ್ಣು ಮಕ್ಕಳಿಗೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಈ ಕೊರತೆ ನೀಗಿಸುತ್ತದೆ.

4) ತಲೆಕೂದಲು ಉದುರುತಿದ್ದರೆ, ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಸೇರಿಸಿಕೊಂಡು ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಹಚ್ಚಿಕೊಳ್ಳುವುದರಿಂದ ತಲೆಕೂದಲು ಉದುರುವುದು ನಿಲ್ಲುತ್ತದೆ.

5) ಬೊಜ್ಜು ಕರಗಿಸಬೇಕು ಎನ್ನುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ರಿಂದ 20 ಎಲೆಯನ್ನು ಅಗೆದು ತಿನ್ನಬೇಕು. ಇದರಿಂದ ಬೇಗ ಬೊಜ್ಜು ನಿವಾರಣೆಯಾಗುತ್ತದೆ.

6) ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನು ತುಪ್ಪದಲ್ಲಿ ಅದ್ದಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ. ಮೂಲವ್ಯಾಧಿ ಬರದಂತೆ ತಡೆಯುತ್ತದೆ.

7) ಕರಿಬೇವಿನ ಗೊಜ್ಜನ್ನು ಮಾಡಿಕೊಂಡು ಅನ್ನದ ಜೊತೆ ಸೇವಿಸಿದರೆ ಕಬ್ಬಿಣ ಅಂಶ ಹೆಚ್ಚುತ್ತದೆ. ಸಕ್ಕರೆ ಖಾಯಿಲೆ ತಡೆಯಬಹುದು.

*ಜಾಗ್ರತಿ ಫೌಂಡೇಶನ್ ಕಾರ್ಕಳ* (ಇವರ ವಾಟ್ಸಾಪ್ ಪುಟಗಳಿಂದ ಸಂಗ್ರಹಿತ)