ಕರಿಬೇವಿನ ಕೊಬ್ಬರಿ ಚಟ್ನಿ

ಕರಿಬೇವಿನ ಕೊಬ್ಬರಿ ಚಟ್ನಿ

ಬೇಕಿರುವ ಸಾಮಗ್ರಿ

ಬೇಕಾಗುವ ವಸ್ತುಗಳು: ಒಣಗಿದ ಕೊಬ್ಬರಿ ೧, ಕಡಲೇ ಬೇಳೆ ೧ ಕಪ್, ೨೫-೩೦ ಕರಿಬೇವಿನ ಗರಿ, ಕೆಂಪು ಮೆಣಸಿನ ಕಾಯಿ ೨೦, ಹುಣಸೆ ಹುಳಿ, ರುಚಿಗೆ ಉಪ್ಪು, ಸ್ವಲ್ಪ ಇಂಗು, ತುಪ್ಪ ೨ ಚಮಚ

 

ತಯಾರಿಸುವ ವಿಧಾನ

ಮೊದಲಿಗೆ ಕರಿಬೇವನ್ನು ಚೆನ್ನಾಗಿ ತೊಳೆದು ಸ್ವಚ್ಚ ಗೊಳಿಸಿ. ಒಣ ಕೊಬ್ಬರಿಯನ್ನು ತುರಿದು ಇಡಿ. ಕರಿ ಬೇವು ಮತ್ತು ಮೆಣಸನ್ನು ಪ್ರತ್ಯೇಕವಾಗಿ ಹುರಿಯಿರಿ. ಕಡಲೇ ಬೇಳೆಯನ್ನು ಹುರಿದು ನಯವಾಗಿ ಹುಡಿಯಾಗುವಂತೆ ಮಿಕ್ಸಿಯಲ್ಲಿ ಹುಡಿ ಮಾಡಿರಿ. ಕೊಬ್ಬರಿ ತುರಿಯನ್ನು ತುಪ್ಪದಲ್ಲಿ ಹುರಿಯಿರಿ. ಇಂಗನ್ನು ಸ್ವಲ್ಪ ಎಣ್ಣೆಯಲ್ಲಿ ಬಿಸಿ ಮಾಡಿ. ಹುಣಸೇ ಹುಳಿಯ ಸಣ್ಣ ಸಣ್ಣ ತುಂಡು ಮಾಡಿ. ನಂತರ ಮೆಣಸಿನ ಕಾಯಿ, ಕೊಬ್ಬರಿ ತುರಿ, ಇಂಗು, ಉಪ್ಪು, ಹುಣಸೇ ಹುಳಿ ಇವನ್ನೆಲ್ಲಾ ಮಿಕ್ಸಿಗೆ ಹಾಕಿ ಪುಡಿ ಮಾಡಿ. ನಂತರ ಮೊದಲೇ ಹುಡಿ ಮಾಡಿ ಇಟ್ಟಿದ್ದ ಕಡಲೇ ಬೇಳೆಯ ಹುಡಿಯನ್ನು ಅದರೊಂದಿಗೆ ಚೆನ್ನಾಗಿ ಬೆರೆಸಿ. ನಂತರ ಗಾಳಿಯಾಡದ ಬಾಟಲಿಯಲ್ಲಿ ತುಂಬಿಡಿ. 

ಸಲಹೆ: ಚೆನ್ನಾಗಿ ಒಣಗಿದ ಕೊಬ್ಬರಿಯನ್ನೇ ಬಳಸಿ. ಯಾಕೆಂದರೆ ಚಟ್ನಿ ದೀರ್ಘಕಾಲ ಉಪಯೋಗಕ್ಕೆ ಬರುತ್ತದೆ

ಹೇಳಿದ್ದು ನನ್ನ ಅಮ್ಮ ಕೆ.ಪಿ.ಸುಲೋಚನ ರಾವ್