ಕರಿಬೇವಿನ ತಂಬುಳಿ

ಕರಿಬೇವಿನ ತಂಬುಳಿ

ಬೇಕಿರುವ ಸಾಮಗ್ರಿ

ಕರಿಬೇವಿನ ಎಸಳು ೨ ಹಿಡಿ, ತೆಂಗಿನತುರಿ ೧/೨ ಕಪ್, ಸಿಹಿ ಮಜ್ಜಿಗೆ ೧ ಕಪ್, ಜೀರಿಗೆ ೧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

ಎರಡು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಕರಿಬೇವಿನ ಎಸಳನ್ನು ಬಾಡಿಸಿ. ಇದಕ್ಕೆ ತೆಂಗಿನತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿ. ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಜೀರಿಗೆ ಜೊತೆ ಕೊಡಿ. ಮಧುಮೇಹಿಗಳಿಗೆ ಈ ತಂಬುಳಿ ತುಂಬ ಒಳ್ಳೆಯದು.

-ಸಹನಾ ಕಾಂತಬೈಲು, ಮಡಿಕೇರಿ