ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ

ಬರಹ

ಕರೆಂಟು ಹೋಗಿ ಕತ್ತಲಿಂದ ತುಂಬಿದ್ದ ಮನೆಯನ್ನ ಬೆಳಗಿಸಿದ್ದು ಈ ಒಂದು ಸಣ್ಣ ಬೆಳಕಿನ ಸೆಲೆ. ನನ್ನ ಕ್ಯಾಮೆರಾದ ಕಣ್ಣಿಗೆ ಒಂದಷ್ಟು ಕಪ್ಪು ಬಿಳುಪಿನ ಸೊಗಡನ್ನ ಹಚ್ಚಿ ಕತ್ತಲೆಯ ನೋಟವನ್ನ ಸೆರೆಯಿಡುವಾಗ ಕಣ್ಣಿಗೆ ಬಿದ್ದ ಈ ಕೆಲವು ಚಿತ್ರಗಳು, ಕಾಲೇಜಿನಲ್ಲಿದ್ದಾಗ ನನ್ನ ಗಣಿತದ ಮಾಸ್ತರರು ಹಾಡಿದ ಬಿ.ಎಂ.ಶ್ರೀ ಯವರ ಮಧುರ ರಚನೆ "ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು" ಸಾಲುಗಳು ಕಿವಿಯಲ್ಲಿ ಗುಯ್ಗುಟ್ಟಿದವು. ಇಂದಿಗೂ ಈ ಹಾಡು ನನ್ನ ಹಿಂದಿನ ಕೆಲದಿನಗಳನ್ನ ನೆನಪಿಸುತ್ತದೆ. "ಕನಸುಗಳ ನನಸಾಗಿಸುತ್ತ" ಬರೆಯುತ್ತ ಸಾಗಿದ ಸರಣಿ ಮಧ್ಯಕ್ಕೆ ನಿಂತಿದೆ ಅದರಲ್ಲಿ ಇವುಗಳ ಬಗ್ಗೆ ಕೆಲ ಸಾಲುಗಳನ್ನ ಮತ್ತೆ ಪೋಣಿಸ್ತೇನೆ.

ಚಿತ್ರ ಸಂಪುಟ: ಕರುಣಾಳು ಬಾ ಬೆಳಕೆ


 
ಚಿತ್ರದಲ್ಲಿರುವ ಕ್ಯಾಂಡಲಿನ ಪ್ರಭೆ ಬಿಸಿಯಿದ್ದರೂ ಚಿತ್ರ ಕಣ್ಣಿಗೆ ತಂಪನೆರೆಯಿತು.