ಕರುಳ ಬಂಧ

ಕರುಳ ಬಂಧ

ಕವನ

ಧರಣಿಯೇ ನಾಚಿದಂತಿದೆ

ಕರುಳ ಬಂಧದ ಚೆಲುವಿಗೆ

ಮುತ್ತುಗಳೇ ಚೆಲ್ಲಾಡಿದಂತಿದೆ

ಮುಖದ ಮೇಲಿನ ಹೂ ನಗೆ

 

ಪ್ರಕೃತಿಯೊಡನೆ ಬೆರೆತ ಹಾಗಿದೆ

ಜೀವಗಳ ಒಡನಾಟವು

ಕೈಯ ಹಿಡಿದು ಹೆಜ್ಜೆ ಇಡುವ

ನೋಟವೆಂಥಾ ಚೆಂದವೂ

 

ಸಾಟಿ ಬೇರೆ ಇಹುದೆ ಜಗದಲಿ

ಕಾಣೋ ಈ ಬಾಂಧವ್ಯಕೆ

ಕೊರತೆಯಿರದು ಅವರ ನಡುವೆ

ಪ್ರೀತಿ ಮಮತೆ ವಾತ್ಸಲ್ಯಕೆ

 

ಸೃಷ್ಟಿಯೊಳಗೆ ದೃಷ್ಟಿ ಹಾಯಿಸೆ

ಅದ್ಭುತಗಳಂತೆ ಕಾಣುವ

ಸ್ವರ್ಗವಿದುವೆ ಕಣ್ಣಿಗೆ ತಂಪ ನೀಡಿದ

ಇದರ ಸುಖವನು ಸವಿಯುವ

-ಸೌಮ್ಯ ಆರ್ ಶೆಟ್ಟಿ, ಮಂಜೇಶ್ವರ 

 

ಚಿತ್ರ್