ಕರೆದ ಮೇಲೆ ಚಿಂತೆ ಏಕೆ?

ಕರೆದ ಮೇಲೆ ಚಿಂತೆ ಏಕೆ?

ಕವನ

ಬಿಲ್ಲಹುಬ್ಬು ಕಣ್ಣಿನಲ್ಲಿ

ಸುಮದ ಶರವನೆಸೆದಿದೆ

ಇನಿಯನೊಡನೆ ಬೆರೆವ ಮನದೆ

ಲಜ್ಜೆ ಮೊಗದಿ ಇಣುಕಿದೆ

 

ತಾರೆಯಂತೆ ಹೊಳೆವ ಕಣ್ಣು

ನೂರು ಕಥೆಯ ಹೇಳಿದೆ

ಕೆಂಪು ಅಧರ ನಗುವ ಸೂಸಿ

ಗೆಳೆಯನನ್ನು ಕರೆದಿದೆ

 

ಸನ್ನೆ ಮಾಡಿ ಕರೆದ ಮೇಲೆ

ಮನದಲೇನು ಚಿಂತೆಯೆ

ನಲ್ಲ ಬಳಿಗೆ ಬರುವ ವೇಳೆ

ಮರೆಯಲೇಕೆ ನಿಂತೆಯೆ

 

ಚೆಲುವೆ ನೀನು ಕರೆದ ಮೇಲೆ

ಬರದೆ ದೂರ ಉಳಿವನೆ

ನಿನ್ನ ಸೊಗಸ ಕಂಡ ಬಳಿಕ

ನಲ್ಲ ನಿನ್ನ ಬಿಡುವನೆ?||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

(ಚಿತ್ರ ಕೃಪೆ ಅಂತರ್ಜಾಲ) 

ಚಿತ್ರ್