ಕರೆಯು ಕೇಳದೇ........

ಕರೆಯು ಕೇಳದೇ........

ಕವನ

ಕರೆಯು ಕೇಳದೇ..?
ನಾ ಕರೆದು ನೋಡಿದೆ
ಹೂ ಅರಳುವ ಮುನ್ನ ನೀ ಮರಳುವೆ ಎಂದು
ಮನ ಮೊಗ್ಗಾಗಿ ಕಾದಿದೆ....!

ಗುಡುಗುವ ಮೋಡಕೆ ನಾ ಮಾನವ ಕಲಿಸುವೆ
ಅಲೆಗಳ ಸದ್ದಿಗೆ ನಾ ಸುದ್ದಿಯ ತಿಳಿಸುವೆ
ಓಡುವ ಜಗವನ್ನೇ ನಾ ನಿಲ್ಲಿಸಿ ಕೂಗುವೆ
ನನ್ನ ಧ್ವನಿ ಕೇಳದೇ...!!

ಕೊಳಲಿನ ನಾದಕೆ ನನ್ನ ಧ್ವನಿಯನು ನೀಡಿದೆ
ಮೋಹನ ಮುರಳಿಗೆ ನಿನ್ನ ಕರೆಯಲು ಕೋರಿದೆ
ಮೆಲ್ಲ ಅಲೆ ಎಬ್ಬಿಸೋ ,ಸಿಹಿ ತಂಗಾಳಿಯು
ನನ್ನ ಜೊತೆಗೂಡಿ ಕರೆದಿದೆ
ನಿನ್ನ ಮನ ಕರಗದೆ..!!!