ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಲಯ ವಾದ್ಯಗಳ ಪಾತ್ರ ಒಂದು ಸಮೀಕ್ಷೆ - ಶತಾವಧಾನಿ ಡಾ. ಆರ್ ಗಣೇಶ್
ಬರಹ
ರಾಗಾನುರಾಗ ಎಂಬ ಒಂದು ವಿನೂತನ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲ ರಾಗಗಳ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಾಡಿನ ಹೆಸರಾಂತ ಸಂಗೀತ ವಿದುಷಿ ಡಾ.ನಾಗವಲ್ಲಿ ನಾಗರಾಜ್ ಹಾಗು ಅವರ ಪುತ್ರಿ ವಿದುಷಿ ರಂಜನಿ ನಾಗರಾಜ್ ಎಲ್ಲ ರಾಗಗಳ ಹಾಗು ಎಲ್ಲ ವಾಗ್ಗೇಯಕಾರರ ರಚನೆಗಳನ್ನೂ ಪ್ರಸ್ತುತಪಡಿಸಿದರು. ಶತಾವಧಾನಿ ಡಾ.ಆರ್.ಗಣೇಶ್ ಅವರು ರಾಗಗಳ ಸೌಂದರ್ಯವನ್ನು ಶಾಸ್ತ್ರೀಯ ದೃಷ್ಟಿಯಿಂದ ಆಸ್ವಾದಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಈ ವೀಡಿಯೋ ತುಣಕಿನಲ್ಲಿ ಗಣೇಶ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಲಯ ವಾದ್ಯಗಳ ಅತಿಹೆಚ್ಚಿನ ಬಳಕೆ ಭಾವಪೂರ್ಣ ಸಂಗೀತಕ್ಕೆ ಮಾರಕವೆಂದು ಅಭಿಪ್ರಾಯ ಪಟ್ಟಿರುವರು.
ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಲಯ ವಾದ್ಯಗಳ ಪಾತ್ರ ಒಂದು ಸಮೀಕ್ಷೆ - ಶತಾವಧಾನಿ ಡಾ. ಆರ್ ಗಣೇಶ್