ಕರ್ನಾಟಕ‌, ರಾಜ್ಯೋತ್ಸವದ‌ ನೈಜ‌ ಆಶಯಗಳನ್ನು ಉಳಿಸಿಕೊಂಡೀತೇ ?...

ಕರ್ನಾಟಕ‌, ರಾಜ್ಯೋತ್ಸವದ‌ ನೈಜ‌ ಆಶಯಗಳನ್ನು ಉಳಿಸಿಕೊಂಡೀತೇ ?...

ಪ್ರಸಕ್ತ ಸನ್ನಿವೇಶದಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಸಿದ್ದತೆಯಲ್ಲಿದೆ. ಇದರ ವರ್ಚಸ್ಸು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲೆಡ ಅತ್ಯಂತ‌ ಪ್ರಭಾವೀ ಮತ್ತು ಪರಿಣಾಮಕಾರಿಯಾಗಿ ಬಂದಿದೆ. ನಾಡು ,ನುಡಿ , ಸಂಸ್ಕ್ರಿತಿಯನ್ನು ಎತ್ತಿ ಹಿಡಿಯುವ‌ ಈ ಆಚರಣೆ ಕನ್ನಡಿಗರನ್ನು ಅಭಿಮಾನಗೊಳ್ಳುವಂತೆ ಮಾಡುತ್ತದೆ. ಕನ್ನಡಿಗರಲ್ಲಿನ‌ ಸಹೋದರತೆ , ಮಾನವೀಯತೆ ಮತ್ತು ಸಹಾಯಹಸ್ತ‌ ಮನಸ್ಸುಗಳು ಭಾರತೀಯ‌ ಸಂಸ್ಕ್ರಿತಿ ಮತ್ತು  ಮಾನವತಾವಾದದಲ್ಲಿ ತನ್ನದೇ  ಆದ‌ ವರ್ಚಸ್ಸು ಮತ್ತು ಪ್ರಭಾವವನ್ನು ಬೀರಿದೆ. ಕೇವಲ‌ ಭಾರತದಲ್ಲಿ ಮಾತ್ರವಲ್ಲದೇ ಔದ್ಯೋಗಿಕ‌ ನೆಲೆಯಲ್ಲಿ ಪ್ರಪಂಚದ‌ ನಾನಾ ಭಾಗಗಳಲ್ಲಿ ನೆಲೆಸಿರುವ‌ ಜನರು ಇಲ್ಲಿಯ‌ ಪರಂಪರೆ, ಸಹೋದರತೆ ಮತ್ತು ಮಾನವತಾವಾದವನ್ನು ಹರಡುತ್ತಾ ಕರ್ನಾಟಕದ‌ ಶ್ರೇಯಸ್ಸಿಗೆ ಕಾರಣಕರ್ತರಾಗಿದ್ದಾರೆ.
 
ಹಲವು ವರ್ಷಗಳಿಂದ‌ ಹೀಗೆ ಆಚರಿಸಿಕೊಂಡು ಬರುತ್ತಿದ್ದ‌ ರಾಜ್ಯೋತ್ಸವದ‌ ಮೂಲ‌ ಆಶಯವಾಗಿದೆ ಕರ್ನಾಟಕದ‌  ಸಮಗ್ರ‌ ಅಭಿವ್ರದ್ದಿ ಮತ್ತು ಅದಕ್ಕೆ ಬೇಕಾದ‌ ಕ್ರಮಗಳನ್ನು ಕೈಗೊಳ್ಳುವುದಾಗಿದೆ. ಆದರೆ ಇಂದಿನ‌ ಕರ್ನಾಟಕದ‌ ಪರಿಸ್ಥಿತಿಯನ್ನು ನೋಡಿದರೆ ನಮಗೆ ಖಂಡಿತಾ ಖೇದವಾಗುತ್ತದೆ. ಕಾರಣ‌, ಇತ್ತೀಚೆಗೆ ಇಲ್ಲಿ ದಿನಂಪ್ರತೀ ಕೇಳಿ ಬರುತ್ತಿರುವ‌ ಕೋಮುಗಲಭೆಗಳು, ಮತ್ತು ನಿರಂತರವಾದಂತಹ‌ ಪ್ರತಿಭಟನೆಗಳು ನಮ್ಮ‌ ಕರ್ನಾಟಕವನ್ನು ಅತೀ ತಳಮಟ್ಟಕ್ಕೆ ತಳ್ಳುತ್ತಿದೆ.ಬಹುಪಾಲು ಕನ್ನಡಿಗರನ್ನು ಪ್ರಶ್ನಿಸಿ ನೋಡಿದಾಗ‌ ನಮಗೆ ಸಿಗುವ‌ ಉತ್ತರ‌ ಇದೇ ಆಗಿದೆ. ಪ್ರತೀವರ್ಷದಂತೆ ಈ ವರ್ಷವೂ ರಾಜ್ಯೋತ್ಸವ‌ ಆಚರಿಸಲಾಗುತ್ತದೆ. ಸಾಧಕರಿಗೆ ಸಮ್ಮಾನ‌ ಮಾಡಲಾಗುತ್ತದೆ. ಆದರೆ ತನ್ನ‌ ನೈಜ‌ ಆಶಯವನ್ನು ಉಳಿಸಿಕೊಳ್ಳುವಲ್ಲಿ ಶ್ರಮಿಸಿದೆಯೇ? ಎಂದು ನಾವು ಅರ್ಥೈಸಿಕೊಳ್ಳಬೇಕಾಗಿದೆ.
 
ಕರ್ನಾಟಕ‌ದ‌ ಜನರ‌ ಸಾಮರಸ್ಯತೆಯನ್ನು ನೋಡಿ ಸಹಿಸದ‌ ಒಂದು ವರ್ಗ‌ ಜನರಲ್ಲಿ ಇಂದು ಕೋಮುಭಾವನೆಯನ್ನು ಪಸರಿಸಿಕೊಂಡು ಅವರನ್ನು ಧರ್ಮದ‌ ಹೆಸರಿನಲ್ಲಿ ಕಚ್ಚಾಡುವಂತೆ ಮಾಡುತ್ತಿದೆ.  ಜನರಲ್ಲಿ ದ್ವೇಷವನ್ನು ಉಂಟುಮಾಡಲು ಹೊರಟಿರುವ‌ ಈ ಜನಗುಂಪುಗಳು ಗೋಹತ್ಯಾ ನಿಷೇಧ‌ ಎಂಬ‌ ಹೆಸರಿನಲ್ಲಿ ತುಂಭಾ ವಾಗ್ವಾದವನ್ನು ಸ್ರಷ್ಟಿಸಿ ಬಹಳ‌ ಅವಾಂತರವನ್ನು ಮಾಡಿತ್ತು. ಹಲವಾರು ಕುಟುಂಬಗಳ‌ ಹೊಟ್ಟೆಪಾಡಿಗೆ ಕೊಳ್ಳಿ ಇಟ್ಟಿತ್ತು. ದೇಶದ‌ ಕಾನೂನನ್ನು ಗೌರವಿಸದೇ, ಜನರು ಯಾವುದನ್ನು ತಿನ್ನಬೇಕು, ಮತ್ತು ಯಾವುದನ್ನು ತಿನ್ನಬಾರದೆಂದು ನೈತಿಕ‌ ಪೋಲೀಸ್ ಗಿರಿಯನ್ನು  ತೋರಿಸುತ್ತಾ ಜನರಲ್ಲಿ ಭಯವನ್ನು ಉಂಟುಮಾಡಲು ಯತ್ನಿಸಿ  ಅಸಫಲತೆಯನ್ನು ಕಂಡಿತು. ಜನರ‌ ಆಹಾರದ‌ ಮುಕ್ತವಾದ‌ ಹಕ್ಕನ್ನು ಕಸಿದುಕೊಳ್ಳುವ‌, ಆಹಾರದಲ್ಲಿ  ನಿರ್ಭಂದವನ್ನು ಹೇರುವಂತೆ ಒತ್ತಡ‌  ನಡೆಸಿತು. ಆದರೆ ಯೋಜನೆಯು ಎನಿಸಿದಷ್ಟು ಫಲಿಸದೇ ಹೋದಾಗ‌ ಬೇರೊಂದು ವೆಷಯವನ್ನು ಮುಂದಿಟ್ಟುಕೊಂಡು ಜನರೆಡೆಯಲ್ಲಿ ವಿಷಬೀಜವನ್ನು ಬಿತ್ತಿ ಈ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.
 
ಇಂದು ಜನರೆಡೆಯಲ್ಲಿ ಪಸರಿಸಿರುವ‌ ಈ ಕೋಮುದ್ವೇಷದಿಂದ‌ ದೇಶದ‌ ಅಭಿವ್ರದ್ದಿಯಲ್ಲಿ ಮುಂಚೂಣಿಯಲ್ಲಿ ಇರಬೇಕಾದ‌ ಕರ್ನಾಟಕ‌ ಶೇಕಡಾ 50 ರಷ್ಟು ಪ್ರತಿಶತ: ಹಿಂದೆ ಬಿದ್ದಿದೆ. ಈ ಸಂವಿಧಾನ‌ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಬದುಕುವ‌ ಹಕ್ಕನ್ನು ಕೊಟ್ಟಿದೆ. ಓರ್ವನ ಆಹಾರವನ್ನು ತಡೆಯುವವನನ್ನು ಖಂಡಿತಾ  ಭೀತಿವಾದಿ ಎಂದು ಉಚ್ಚರಿಸಬಹುದು. ಸಮಾಜದಲ್ಲಿ ಗಲಭೆ ಸ್ರಷ್ಟಿಸಲು ಯತ್ನಿಸಿ ಜನರಲ್ಲಿ ಆತಂಕವನ್ನು ಉಂಟುಮಾಡುವವನು ಖಂಡಿತಾ ಭಯೋತ್ಪಾದಕ‌ನಾಗುತ್ತಾನೆ. ನಾವು ಈ ಸಮಾಜದಲ್ಲಿ ಅವಲೋಕಿಸಿ ನೋಡಿದಾಗ‌, ಇದೆಲ್ಲ ಕೆಲಸಗಳಿಗೆ ಕುಮ್ಮಕ್ಕು ನೀಡುವ‌  ಜನರಿಗೆ ಸಹಕಾರ‌ ನೀಡುವ‌ ಒಂದು ರಾಜಕೀಯ‌ ಪಕ್ಷ‌ ಈ ಸಮಾಜದಲ್ಲಿದೆ. ಅವರ‌ ನೈಜ‌ ಉದ್ದೇಶ‌ ಪರಧರ್ಮೀಯರ‌ ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ತರುವುದು ಮತ್ತು ಸಮಾಜದಲ್ಲಿ ಗಲಭೆಯನ್ನು ಸ್ರರ್ಷ್ಟಿಸುವುದಾಗಿದೆ. ಅಲ್ಲದೇ ಪ್ರಸಕ್ತ‌ ಕರ್ನಾಟಕದಲ್ಲಿ ರಾಜ್ಯಭಾರಮಾಡುತ್ತಿರುವ‌ ರಾಜಕೀಯ‌ ಪಕ್ಷಗಳು ನಡೆಸುವ‌ ಎಲ್ಲಾ ಕಾರ್ಯಕ್ರಮಗಳನ್ನು ಪ್ರತಿಭಟಿಸುವುದು ಮತ್ತು ವಿರೋಧಿಸುವುದಾಗಿದೆ.
 
ಇತ್ತೀಚೆಗೆ ಪ್ರಸಕ್ತ‌ ಆಡಳಿತ‌ ಮಾಡುತ್ತಿರುವ‌ ಒಂದು ಸರ್ಕಾರವನ್ನು ಹೀಯಾಳಿಸುವುದು , ಸರ್ಕಾರದಿಂದ‌ ಬರುವ‌ ಯಾವುದೇ ಒಳ್ಳೆಯ‌ ಕಾರ್ಯವನ್ನು ವಿರೋಧಿಸುವುದು ರೂಢಿಮಾಡಿಕೊಂಡಿದ್ದಾರೆ. ಆದರೆ ಇದೆಲ್ಲವನ್ನೂ ಮಾಡಿಕೊಂಡು ಇವರಿಗೆ ದಕ್ಕುವುದಾದರೂ ಏನು ? ಖಂಡಿತವಾಗಿಯೂ ಈ ಸಮಾಜವನ್ನು ಇಂತಹಾ ಭೀತಿವಾದಿಗಳಿಂದ‌ ದೂರಪಡಿಸುವ‌ ಅಗತ್ಯತೆ ತುಂಬಾ ಇದೆ.  ಅಲ್ಲದೇ ಕೋಮು ದ್ವೇಷವನ್ನು  ಭೆಳೆಸುವ‌ ಈ ಸಂಘಟನೆ ಈ ರಾಜ್ಯದ‌ ಜನತೆಗೆ ಮಾಡಿರುವ‌ ಪ್ರಯೋಜನವಾದರೂ ಏನು ? ನಮ್ಮ‌ ಸಮಾಜದಲ್ಲಿ ನೆಲೆಸಿರುವ‌ ಸಾವಿರಾರು ನಿರುದ್ಯೋಗಿಗಳ‌ ಅಥವಾ ಉದ್ಯೋಗಾಕಾಂಕ್ಷಿಗಳಿಗೆ ನೌಕರಿಯನ್ನು ಒದಗಿಸಲು ಸಹಕರಿಸಿದೆಯೆ? ಈ ಸಮಾಜದ‌ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಭಯಮುಕ್ತವಾಗಿ ಈ ಸಮಾಜದಲ್ಲಿ ನೆಡೆದಾಡಲು ಸಹಕರಿಸಿದೆಯೇ? . ಇಲ್ಲ‌. ಖಂಡಿತಾ ಇಲ್ಲ‌.
 
ನಮ್ಮ‌ ಸಮಾಜದ‌ ಯುವಕ‍,ಯುವತಿಯರು ಇಂದು ಎದುರಿಸುತ್ತಿರುವ‌ ಪ್ರಮುಖ‌ ಸಮಸ್ಯೆಯಾಗಿದೆ ಸರಿಯಾದ‌ ಉದ್ಯೋಗ‌ ದೊರೆಯದೇ ಇರುವುದು. ಉತ್ತಮವಾದ‌ ವಿದ್ಯಾಭ್ಯಾಸ‌ ಇದ್ದರೂ ಈ ಸಮಾಜದಲ್ಲಿ ಉದ್ಯೋಗಕ್ಕಾಗಿ ಯುವ‌ ಪೀಳಿಗೆ ತುಂಭಾ ಕಷ್ಟಪಡುತ್ತಿದೆ. ಯಾರಿದ್ದಾರೆ ಇವರಿಗೆ ಸಹಕಾರ‌ ನೀಡುವವರು ? ಇವರ‌ ಭಾವನೆಗಳಿಗೆ ತನ್ನೀರೆರಚುವವರು ? ಓರ್ವ‌ ಉದ್ಯೋಗಾಕಾಂಕ್ಷಿ ಉದ್ಯೋಗಕ್ಕಾಗಿ 15 ರಿಂದ‌ 20 ಕಂಪೆನಿಗಳಲ್ಲಿ ಇಂಟರ್ವೂ ನಡೆಸಿ ಅತೀ ಪ್ರಯಾಸದಿಂದ‌ ಉದ್ಯೋಗ‌ ಗಿಟ್ಟ್ಟಿಸಿಕೊಳ್ಳುತ್ತಾನೆ. ಅಲ್ಲದೇ ಒಂದು ಕಂಪೆನಿಯಲ್ಲಿರುವ‌ 2‍ ರಿಂದ‌ 4 ಪೋಸ್ಟುಗಳಿಗೆ 50 ರಿಂದ‌ 60 ಆಕಾಂಕ್ಷಿಗಳು ಬರುತ್ತಾರೆ. ಹಲವು ರೌಂಡ್ ಗಳಲ್ಲಿ ಸಂದರ್ಶನ‌ ಮುಗಿಸಿ ಧಣಿದುಕೊಂಡು ವಾಪಸ್ಸಾಗುತ್ತಾರೆ. ಇಂತಹ‌ ಯುವಕ‌, ಯುವತಿಯರಿಗೆ ಉದ್ಯೋಗ‌ ದೊರಕಿಸಿಕೊಡುವಲ್ಲಿ  ಈ ಭೀತಿವಾಧಿ ಜನರ‌ ಗುಂಪುಗಳು ಸಹಕರಿಸಿದೆಯೆ? ಇಲ್ಲ‌. ಖಂಡಿತಾ ಇಲ್ಲ‌. ಬದ‌ಲಾಗಿ ಅತೀ ಕಷ್ಟದಿಂದ‌ ಉದ್ಯೋಗ‌ ದೊರೆತು, ಮನೆಯವರು ಸ್ವಲ್ಪ‌ ಸಮಾಧಾನ‌ ತಂದುಕೊಂಡು ಕುಳಿತಿರುವಾಗ‌, ಕೆಲ‌ ದಿವಸಗಳ‌ ಅಂತರದಲ್ಲಿಯೇ ಕೆಲಸ‌ ಮುಗಿಸಿ ರಾತ್ರಿ ಮನೆಗೆ ಹಿಂತಿರುಗುತ್ತಿದ್ದಾಗ‌ ಅವನನ್ನು ಕೋಮುವಾಧಿಗಳು ಧರ್ಮದ‌ ಹೆಸರಿನಲ್ಲಿ ಕೊಳ್ಳುತ್ತಾರೆ. ಇಡೀ ಸಮಾಜವೇ ಧಿಗ್ಭ್ರಮೆಗೊಳ್ಳುತ್ತದೆ. ಎಲ್ಲಿದೆ  ನಮ್ಮಲ್ಲಿಯ‌ ಮಾನವೀಯತೆ? ಎಲ್ಲಿದೆ ನಮ್ಮಲ್ಲಿ ಆತ್ಮಾಭಿಮಾನ‌ ?
 
ಇಂತಹಾ ಕಾರಣಗಳಿಂದಾಗಿ ಇಂದು ಅನೇಕ‌ ಯುವಕ‌, ‍ಯುವತಿಯರು ಉದ್ಯೋಗಕ್ಕೆ ಹೋಗಲು ನಿರಾಕರಿಸುತ್ತಾರೆ.  ನಮ್ಮಲ್ಲಿ ಬಂಡವಾಳಶಾಹಿಗಳು , ಉದ್ಯಮಿಗಳು ಕಂಪೆನಿಗಳನ್ನು ತೆರೆಯಲು ಹಿಂಜರಿಯುತ್ತಾರೆ. ಖಂಡಿತವಾಗಿಯೂ ನಾವು ಕೋಮುದ್ವೇಷವನ್ನು ಬಿತ್ತರಿಸುವವರ‌ ವಿರುದ್ದ‌ ಸಾಂವಿಧಾನಿಕವಾಗಿ ಹೋರಾಡಬೇಕಾಗಿದೆ. ಇಲ್ಲಿರುವ‌ ವಿಧ್ಯಾರ್ಥಿಗಳು, ಯುವಕ‌, ಯುವತಿಯರು ಈ ಕರ್ನಾಟಕದ‌ ಸಂಪತ್ತಾಗಿದ್ದಾರೆ. ಅವರಿಗೆ ಉತ್ತಮ‌ ವಿದ್ಯೆಗೆ ಅನುವು ಮಾಡಿ ಕೊಡುವುದು ಮತ್ತು ಯುವಕ‌,ಯುವತಿಯರಿಗೆ ಉತ್ತಮ‌ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ನಾವು ಸಹಕಾರಿಯಾಗಬೇಕಗಿದೆ. ಆಗ‌ ಮಾತ್ರ‌ ನಾವು ಮಾನವತಾವಾದಿಗಳಾಗುತ್ತೇವೆ. ಆಗ‌ ಮಾತ್ರ‌ ಈ ಕರ್ನಾಟಕ‌ ರಾಜ್ಯೋತ್ಸವದ‌ ಆಶಯಗಳು ಫಲಪ್ರದವಾಗುತ್ತದೆ.