ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

ಬರಹ

 ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶ ನೋಡಲಿಕ್ಕಂದು kseeb.org ಗೆ ಭೇಟಿ ಕೊಟ್ಟ ನನಗೆ ಇನ್ನೊಂದೆರಡು ಘಂಟೆ ಕಾಯಬೇಕಾಗಿ ಬಂತು. ಆಗ ವೆಬ್ ಸೈಟ್ ನಲ್ಲಿದ್ದ ಇತರೆ ಕೊಂಡಿಗಳನ್ನ ಕ್ಲಿಕ್ಕಿಸುತ್ತಿದ್ದಾಗ ಹೊರಬಿತ್ತು ನೋಡಿ ಈ ಸುದ್ದಿ. 

ಅಲ್ಲೇ ಇದ್ದ http://karnatakaeducation.org.in/  ನೋಡಿದಾಕ್ಷಣ (ಇಷ್ಟೊತ್ತಿಗೆ ನೀವು ನೋಡಿರ ಬೇಕಲ್ಲಾ) ನಮ್ಮ ಸರ್ಕಾರಿ ವೆಬ್ ಸೈಟ್ ಗಳ ಸುರಕ್ಷತೆ ಎಷ್ಟು ಚೆನ್ನಿದೆ ಅನ್ನಿಸ್ತು. 

ಅದನ್ನ ಬಿಡಿ. ಈ ಕೊಂಡಿ ನೋಡಿ : http://karnatakaeducation.org.in/administrator/   ಹ್ಯಾಕ್ ಆಗಿದೆ.

 ದಿನಾ ಬೆಳಗ್ಗೆ ಎದ್ರೆ ಇತ್ತೀಚೆಗೆ ಇಂತಹಗಳದ್ದೇ ಸುದ್ದಿ. ಆ ಸರ್ಕಾರದ ವೆಬ್ ಸೈಟ್ ಹ್ಯಾಕ್ ಆಯ್ತು ಈ ಸರ್ಕಾರದ ವೆಬ್ ಸೈಟ್ ಹ್ಯಾಕ್ ಆಯ್ತು ಅಂತ. ಐ.ಟಿ ಕಂಪನಿಗಳಿಗೆ ಕೊಟ್ಯಾಂತರ ರೂಪಾಯಿ ಜಮೀನುಗಳನ್ನು ಬರೆದು ಕೊಡುವ ಸರ್ಕಾರಕ್ಕೆ ತನ್ನ ವೆಬ್ ಸೈಟ್ ಗಳನ್ನ ಸುರಕ್ಷಿತವಾಗಿಡಲಿಕ್ಕೇನು ಕಷ್ಟ? 

ಈ ಹ್ಯಾಕ್ ನ ಕೆಲವು ಸ್ಕ್ರೀನ್ ಶಾಟ್ಗಳು ನಿಮ್ಮ ಮುಂದೆ ಬರಲಿವೆ.