ಕರ್ನಾಟಕ ಪ್ರವಾಸ
ಕವನ
ಬಾ ಪ್ರವಾಸಕ್ಕೆ ಬಾ ವಿಹಾರಕ್ಕೆ
ಕರುನಾಡ ಊರಿಗೆ ಕನ್ನಡದ ಬೀಡಿಗೆ
ಕುವೆಂಪು, ಬೆಂದ್ರೆ ಜನಿಸಿದ ನಾಡಿಗೆ
ಮಾಸ್ತಿ ಕನ್ನಡದ ಆಸ್ತಿಗೆ
ಅಲ್ಲಿದೆ ಮೈಸೂರು ಇಲ್ಲಿದೆ ಬೇಲೂರು
ಕರಾವಳಿ ಮಲೆನಾಡು ಕೊಲ್ಲೂರು
ಶಾಂತಿ ಅಹಿಂಸೆಯ ಪ್ರತೀಕ ಗೊಮ್ಮಟೇಶ
ನೋಡಿ ಬಾ ಹತ್ತಿ ಬಾ
ಅದೊ ನೋಡು ಸಹ್ಯಾದ್ರಿ
ಇದೊ ನೋಡು ಕೊಡಚಾದ್ರಿ
ಒಮ್ಮೆ ನೋಡು ಮೂಡಬಿದ್ರಿ
ಅತಿ ಎತ್ತರವಿರುವುದೇ ಮುಳ್ಳಯ್ಯನಗಿರಿ
ಕುಪ್ಪಳ್ಳಿಯ ಕವಿಶೈಲ ಪಂಪನ ಬನವಾಸಿ
ಬಿಜಾಪುರದ ಗೋಲ ಗುಮ್ಮಟ
ಕೊಡಗಿನ ಕಾವೇರಿಯ ತಲಕಾಡು
ನೀ ಬಂದು ನೋಡು
ಪಂಪ ರನ್ನ ಜನ್ನ ಹರಿಹರ ರಾಘವಾಂಕರು
ಕಿತ್ತೂರು ಚೆನ್ನಮ್ಮ ಸಂಚಿ ಹೊನ್ನಮ್ಮರು
ಹುಟ್ಟಿ ಆಡಿ ಬೆಳೆದು ಓದಿ ಬರೆದ
ನಾಡನ್ನೊಮ್ಮೆ ನೋಡು ಬಾ
ಅಕ್ಕಾ ಮಹಾದೇವಿ ಬಸವಣ್ಣ
ಸರ್ವಜ್ಞ ಬಸವಾದಿ ಶರಣರು
ಸಿರಿಮನೆ ಜೋಗ ಜಲಪಾತ ವದು
ಮೇಲಿಂದ ಬೀಳುವುದು ಜಲಧಾರೆಯಾಗಿ
ಇಂಥ ನಾಡನ್ನೊಮ್ಮೆ ನೋಡು ಬಾ
ಈ ನಾಡಲ್ಲಿ ಹುಟ್ಟಿದ ನಾವೇ ಧನ್ಯರು
-ಎಸ್. ನಾಗರತ್ನ ಚಿತ್ರದುರ್ಗ
ಚಿತ್ರ್