ಕಲಾಂ ಎಂಬ ಕಲಿಕೆಯ ಆಗರ

ಕಲಾಂ ಎಂಬ ಕಲಿಕೆಯ ಆಗರ

ಅಬ್ದುಲ್ ಕಲಾಂರವರು ಒಬ್ಬ ಭಾರತೀಯ ವಿಜ್ಞಾನಿ ಹಾಗೂ ಭಾರತದ 11ನೇಯ ರಾಷ್ಟ್ರಪತಿಯಾಗಿ ಸೇವೆಯನ್ನು ಸಲ್ಲಿಸಿದವರು. ಅಂತಹ ವ್ಯಕ್ತಿಯ ಅನುಭವಗಳು, ಅವರು ಪ್ರಸ್ತುತಪಡಿಸಿದ ತತ್ವ- ಸಿದ್ಧಾಂತಗಳು ಮತ್ತು ನುಡಿಮುತ್ತುಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ.

ಎಲ್ಲರಲ್ಲೂ ಕಲಾಂರಂತಹ ವ್ಯಕ್ತಿತ್ವ ಇದ್ದರೆ ಮಾತ್ರ ದೇಶವು ಇನ್ನೊಮ್ಮೆ ಅಬ್ದುಲ್ ಕಲಾಂರನ್ನು ಕಾಣಲು ಸಾಧ್ಯ. ಕೆಲವರು ಕಪ್ಪು ಬಣ್ಣ ಎಂದರೆ ದ್ವೇಷಿಸುವವರು ಇರುತ್ತಾರೆ. ಆದರೆ ಶಾಲೆಯಲ್ಲಿನ ಕಪ್ಪುಹಲಗೆಯೇ(ಬ್ಲಾಕ್ ಬೋರ್ಡ್) ನಮ್ಮನ್ನು ವಿದ್ಯಾವಂತರನ್ನಾಗಿಸಲು ಪಾತ್ರ ವಹಿಸುತ್ತದೆ ಎಂಬ ಅವರ ಮಾತನ್ನು ನಮ್ಮಲ್ಲಿ ಅಳವಡಿಸಿಕೂಳ್ಳಬೇಕು.

ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟಗಳು ಬರುವುದು ಸಹಜ. ಆದ್ದರಿಂದ ಕಲಾಂರವರೇ ಹೇಳಿದಂತೆ "ನಾವು ರೆಕ್ಕೆಗಳೊಂದಿಗೇ ಹುಟ್ಟಿರುತ್ತೇವೆ. ಆದ್ದರಿಂದ ತೆವಳುವುದನ್ನು ಬಿಟ್ಟು ರೆಕ್ಕೆಗಳನ್ನು ಉಪಯೋಗಿಸಿಕೊಂಡು ಜೀವನದಲ್ಲಿ  ಉತ್ತುಂಗಕ್ಕೆ ಏರಬೇಕು."  ಕಲಾಂರವರು ಒಂದೇ ಹೆಜ್ಜೆಯಲ್ಲಿ ಪ್ರಗತಿ ಹೊಂದಲಿಲ್ಲ. ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸವೇ ಔಷಧ ಎಂದು ಪ್ರಯತ್ನ ಮಾಡಿ, ಸಾಧಿಸಿ, ಇಂದು ಚಿಕ್ಕ ಮಗುವಿನ ಬಾಯಲ್ಲೂ ಇವರ ಹೆಸರು ಬರುವಷ್ಟು ಚಿರಪರಿಚಿತರಾಗಿದ್ದಾರೆ. "ನೀನು ಮಲಗಿರುವಾಗ ಕಾಣುವ ಕನಸು ಕನಸಲ್ಲ ; ಎದ್ದಿರುವಾಗ ಭವಿಷ್ಯದ ಕುರಿತು ಕನಸು ಕಂಡು ನನಸು ಮಾಡುವುದು ನಿಜವಾದ ಕನಸು " ಎಂದು ನಮಗೆ ತಿಳಿಸಿದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರಿಗೆ ನಮ್ಮ ಕಡೆಯಿಂದ ಪ್ರೀತಿ ಹಾಗೂ ಗೌರವಪೂರ್ವಕವಾದ ದೊಡ್ಡ ಸಲಾಂ.....

 -ನವ್ಯಾ ರಾಮಚಂದ್ರ ಹೆಬ್ಬಾರ ,

ಒಂಭತ್ತನೇ ತರಗತಿ , ಕುಮಟಾ (ಉತ್ತರಕನ್ನಡ)

ಚಿತ್ರ ಕೃಪೆ: ಇಂಟರ್ನೆಟ್ ತಾಣ