ಕಲಿಕಾ ಚೇತರಿಕೆ
ಕವನ
ಚೇತರಿಸು ಚೇತರಿಸು ಚೇತರಿಸು ಮಗುವೆ
ಕಲಿವಿನುನ್ನತಿಗಾಗಿ ಚೇತರಿಸು ಮಗುವೆ||ಪ||
ಶಾಲೆ ಮುಚ್ಚಿತು ಅಂದು
ಕೊರೋನಾ ಮುಂದಡೆ ನಿಂದು
ಹದಿನೆಂಟು ತಿಂಗಳಲಿ
ಕಲಿಕೆಯಂತರ ಬಂದು...
ನಡುಗಿಸಿತು ನಲುಗಿಸಿತು
ವಿದ್ಯೆಯಡಿಪಾಯವನೆ
ಬೋಧಿಸಿತು ಶಿಕ್ಷಣಕೆ
ಶಾಲೆಯೇ ಆಧಾರ...||೧||
ಕನಸುಗಳು ಕಮರುತಿರೆ
ವರ್ಗ ಬದಲಾಗುತಿರೆ
ಆರು ಏಳೆಂಟೆಂದು
ವರ್ಷಗಳೆ ಉರುಳುತಿರೆ...
ನಿನ್ನ ಜ್ಞಾನದುನ್ನತಿಗೆ
ಬಂದಿಹುದು ಚೇತರಿಕೆ...||೨||
ಕಲಿಕೆಯಾ ವಸ್ತುವನು
ಅರೆದು ಕುಡಿಸಲು ಬೇಡಿ
ಅರೆಯುವುದ ಕಲಿಸಿ ಕೊಡಿ
ಕಲಿಕಾಫಲವನ್ನು....
ಹಿಂದೆ ಉಳಿಯುವರನ್ನೂ
ಪಿಡಿದು ಮುಂದಕೆ ತರಲು
ಚಟುವಟಿಕೆ ಹಾಳೆ ಜತೆ
ಕುಣಿಸಿ ಬಿಡು ಮಗುವನ್ನು...||೩||
ಓದದಿರೆ ಬರೆಯದಿರೆ
ಮುಂದೆ ಬಂದುದೆ ಮಿಥ್ಯ!
ಓದು ಬರೆಹವೆ ಪಠ್ಯ
ಕಲಿಕೆಯದು ನಿತ್ಯ
ಕೂಡದಿರೆ ಕಳೆಯದಿರೆ
ನಿತ್ಯ ವ್ಯವಹಾರದಲಿ
ಬಾಳು ಅಂಕೆಗೆ ಸಿಗದು
ತಿಳಿದುಕೊ ಸತ್ಯ...||೪||
-ಜನಾರ್ದನ ದುರ್ಗ, ಪುತ್ತೂರು
ಚಿತ್ರ್