ಕಲಿಯುಗದಲ್ಲಿ ಅಳಿಯದ ಸಂಕ್ರಾಂತಿ

ಕಲಿಯುಗದಲ್ಲಿ ಅಳಿಯದ ಸಂಕ್ರಾಂತಿ

ಕವನ

ಮುಂಜಾನೆ ಮಂಜಲ್ಲಿ ಅರಿಯದೆ

ಮನೆಮುಂದೆ ಅರಳುವ ರಂಗೋಲಿ

ಬಣ್ಣ ಬಣ್ಣದಿ ಗೋಚರಿಸುವ 

ಸೂರ್ಯ-ಚಂದ್ರರ ಬೆಳಕಿಂದ

ಕಲಿಯುಗದಲ್ಲಿ ಅಳಿಯದ ಸಂಕ್ರಾಂತಿ

 

ಮಡಿ ಬಟ್ಟೆ ತೊಟ್ಟು ಮುಡಿ 

ಬಿಟ್ಟ ಹೆಂಗಸರು ಮನೆಯಲ್ಲಿ

ಕಳೆದ ಘಟನೆಗಳು ಮರೆಯಾಗಿಸುವಂತೆ

ನಗುವನು ಪೋಣಿಸುವ ಗೃಹಿಣಿ'ಯರಿಂದ

ಕಲಿಯುಗದಲ್ಲಿ ಅಳಿಯದ ಸಂಕ್ರಾಂತಿ

 

ಸಂಕ್ರಾಂತಿ ಚಳಿ ರಕ್ಷಣೆಗೆ

ಅರಿಷಿಣ ಎಳ್ಳು ಮೈಗಚ್ಚಿ

ಕಿರಿ-ಹಿರಿಯರೆಲ್ಲ ಸ್ನಾನವ ಮಾಡಿ

ಎಳ್ಳಚ್ಚಿ ಬಡಿದ ಸಜ್ಜಿ ರೊಟ್ಟಿಯಿಂದ

ಕಲಿಯುಗದಲ್ಲಿ ಅಳಿಯದ ಸಂಕ್ರಾಂತಿ

 

ಬದಲಾಗೋ ರವಿ ಪಥವು ಉತ್ತಮವೆಂದ

ಶಂಕರನ ಬಳಗದ ನಿಯಮ ಪಾಲಕ'ರಿಂದ

ಮುಂದುವರೆದ ವಿವಿಧ ಸಂಸ್ಕೃತಿಯ 

ಆಚರಣೆ ಸುಂದರ ಸೊಬಗಿಂದ

ಕಲಿಯುಗದಲ್ಲಿ ಅಳಿಯದ ಸಂಕ್ರಾಂತಿ

 

 –“ಕರಿಗೂಳಿ” ಗೂಳೇಶ್ ಬಿ ಯಾಗಾಪೂರ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್