ಕಲಿಯುಗ
ಕವನ
ಕಲಿಯುಗ
ಕಾಮಾಂಧನೋರ್ವ ಪರಸತಿಯ ಕದ್ದೊಯ್ಯೆ
ಮಂಗಗಳೊಡಗೂಡಿ ಸಾಗರವಂ ದಾಟಿ
ಅವನಂ, ಅವನ ರಾಜ್ಯವಂ, ನಿರ್ಣಾಮ ಗೈದ ಶ್ರೀರಾಮ
ಅದು, ತ್ರೇತಾಯುಗ
ಕಾಮಾತುರನೋರ್ವ ಸಹೋದರನ ಸತಿಯಂ
ಸರಸಕ್ಕೆ ಕರೆಯೆ, ಬಲವಂತದಿಂ ಅವಳ ಸೆರಗ ಸೆಳೆಯೆ
ಹದಿನೆಂಟು ಅಕ್ಷೋಹಿಣಿ ಸೈನ್ಯವಂ ಸರ್ವನಾಶ ಗೈಸಿದ ಶ್ರೀಕೃಷ್ಣ
ಅದು, ದ್ವಾಪರಯುಗ
ಇವುಗಳಂ ಓದಿ, ಕೇಳಿ, ನಾವು ಕಲಿತದ್ದೇನು?
ಲಜ್ಜೆ, ಭಯವಂ ಬಿಟ್ಟು, ಸಂಬಂಧಗಳ ಬದಿಗಿಟ್ಟು
ಪರಸತಿಯ ಬಯಸುವುದು, ಸೆರಗನ್ನು ಸೆಳೆಯುವುದು
ಪಾಪ ಭೀತಿಯೂ ಇಲ್ಲ, ದೈವಭಯ ಮೊದಲೇ ಇಲ್ಲ
ಏಕೆಂದರಿದು, ಕಲಿಯುಗ.....!
ಫೋಟೋ ಕೃಪೆ: indolink.com
ಚಿತ್ರ್