ಕಲಿಯೋಣ ಬಾ ಕನ್ನಡ
ಕವನ
ಕನ್ನಡ ತಾನೇ ಮಾತೃ ಭಾಷೆ
ಕನ್ನಡ ತಾನೇ ನಾಡ ಭಾಷೆ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಎಂದು ಕನ್ನಡವೇ ಎಂದೆಂದೂ
ಬೇರೆ ಭಾಷೆ ಕಲಿಯಲು ಕನ್ನಡವೇ ಬೇಕು ಮೊದಲು
ಇಲ್ಲ ವಾದರೆ ಕನ್ನಡ ಬಟಾಬಯಲು
ಬರೆಯಬೇಕು ಕನ್ನಡಿಗರ ಎದೆಯಲ್ಲಿ ಉಯಿಲು
ಕನ್ನಡವ ಕಲಿಯಬೇಕು ಯಾವಾಗಲೂ
ಮುಚ್ಚುವಿರೇಕೆ ಕನ್ನಡ ಶಾಲೆಯನ್ನು
ಕಲಿಯಲ್ಲವೆ ಕನ್ನಡ ಭಾಷೆಯನ್ನು
ನಾವಾಡುವ ಭಾಷೆಯನ್ನು
ಮಾತೃಭಾಷೆ ಕನ್ನಡವನ್ನು
ಮೊಳಗಲಿ ಮೊಳಗಲಿ ಕನ್ನಡದ ಕಹಳೆ
ಹಚ್ಚು ಕನ್ನಡ ಹಣತೆ ಕನ್ನಡತಿ ಮಗಳೆ
ಬಿಡ ಬೇಡ ಬೇರೆ ಭಾಷೆ ಯಲ್ಲಿ ಬೊಗಳೆ
ನೀ ಕನ್ನಡದ ಮಹತ್ವವ ಹೋಗಳೆ
ಕಲಿಯಲು ಸುಲಭ ಕನ್ನಡ ಅಕ್ಷರ ಮಾಲೆ
ಸುಂದರ ಅತಿ ಸುಂದರ ಪದಗಳ ಸಾಲೆ
ಗತ ವೈಭವ ಸಾರಿದೆ ಇತಿಹಾಸದ ಪುಟಗಳ ಮೇಲೆ
ಕನ್ನಡಮ್ಮ ನು ಎಂದಿಗೂ ಜಯಶೀಲೆ
-ಎಸ್.ನಾಗರತ್ನ ,ಚಿತ್ರದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್