ಕಲೆಯ ಬಲೆ
ಕವನ
ಈ ಸುಂದರ ಕಲೆಯ ಬಲೆಯಲಿ
ಈ ಕಣ್ಗಳು ಸೆರೆಯಾದವು ಮೋಡಿಯಲಿ
ಈ ಮೋಹಕ ಕಲಾನಿಲಯದಲಿ
ಜೀವತುಂಬಿ ಶಿಲ್ಪಗಳು ನಲಿಯುತಲಿ
ಬೆರೆತಿದೆ ಒಂದಾಗಿ ನನ್ನ ಬಾಳಲಿ
ಆ ದೇವನ ಸೃಷ್ಟಿಯ ಸಾರವಿಲ್ಲಿ
ಶಿಲಾಬಾಲಿಕೆ ಉಸಿರುಪಡೆದು ಬಂದಾಗ
ಮಧುರ ಭಾವನೆಗಳನು ಮನ ಕಂಡಾಗ
ಶಿಲಾಸುಂದರಿಯ ಬಾಹುಗಳಲಿ ನಾ ನಲಿದಾಗ
ನಮ್ಮಿರ್ವರ ಹೃದಯಗಳು ಒಂದಾದಾಗ
ಜೀವ -ಜೇನು , ಜೇನ ಸವಿ ಆಗ
ಕಾಮಶಾಸ್ತ್ರ ಅಲಂಕಾರಶಾಸ್ತ್ರ ಸಕಲಶಾಸ್ತ್ರವು
ಮೂಡಿದಲ್ಲಿ ಕಲ್ಲು ಕಲ್ಲಲಿ ಜೀವ ತಳೆದು
ಕಾಣುವ ಮೈಮನಗಳ ಮರೆಸುತ್ತಾ
ಕಲೆಯ ಕಣ್ಗಳುಳ್ಳ ಹೃದಯವ ತಣಿಸುತ್ತಾ
ಭಾವುಕ ಜೀವಿಗಳ ಉಸಿರಾಗಿ
ಕವಿಯ ಕಾವ್ಯ ವಾಹಿನಿಯಾಗಿ
ಮೆರೆಯುತಿಹದು ಶಿಲ್ಪ ಅಮರವಾಗಿ
ಶ್ರೀ ನಾಗರಾಜ್