ಕಲ್ಲಂಗಡಿ ಸಿಪ್ಪೆಯ ಮಸಾಲೆ ಪಲ್ಯ

ಕಲ್ಲಂಗಡಿ ಸಿಪ್ಪೆಯ ಮಸಾಲೆ ಪಲ್ಯ

ಬೇಕಿರುವ ಸಾಮಗ್ರಿ

ಕಲ್ಲಂಗಡಿ ಹಣ್ಣಿನ ಸಿಪ್ಪೆ ಬೇಕಾಗುವಷ್ಟು, ಒಗ್ಗರಣೆಗೆ- ಒಣ ಮೆಣಸು ೫-೬, ಸಾಸಿವೆ, ಅರಶಿನ ಹುಡಿ, ಕರಿಬೇವು, ತೊಗರಿ ಬೇಳೆ, ಉದ್ದಿನ ಬೇಳೆ, ಕಡಲೆಬೇಳೆ, ಎಣ್ಣೆ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಕೊತ್ತಂಬರಿ, ಜೀರಿಗೆ, ತೆಂಗಿನ ಕಾಯಿಯ ತುರಿ ೪ ಚಮಚ

 

ತಯಾರಿಸುವ ವಿಧಾನ

ಕಲ್ಲಂಗಡಿ (ಬಚ್ಚಂಗಾಯಿ) ಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಕತ್ತರಿಸಬೇಕು. ಒಗ್ಗರಣೆಗೆ ಒಣಮೆಣಸು, ಸಾಸಿವೆ, ಅರಶಿನ ಹುಡಿ, ಕರಿಬೇವು, ತೊಗರಿ, ಉದ್ದು, ಕಡ್ಲೆ ಬೇಳೆ ಸ್ವಲ್ಪ, ಎಣ್ಣೆ ಸೇರಿಸಿಯಾದಾಗ, ಹಸಿ ಮೆಣಸಿನಕಾಯಿ ಖಾರಕ್ಕೆ ತಕ್ಕಷ್ಟು ಹಾಕಿ, ಹೆಚ್ಚಿಟ್ಟ ಹೋಳುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಉಪ್ಪು, ಬೆಲ್ಲ ಹಾಕಿ ಬೇಯಿಸಬೇಕು. ಕೊತ್ತಂಬರಿ, ಜೀರಿಗೆ, ನಾಲ್ಕು ಒಣಮೆಣಸು, ತೆಂಗಿನಕಾಯಿ ಎಸಳು ಹಾಕಿ ರುಬ್ಬಿ ಸೇರಿಸಿ ಕುದಿಸಬೇಕು. ಮಸಾಲೆಪಲ್ಯ ಕುಚುಲಕ್ಕಿ ಗಂಜಿ ಜೊತೆ ರುಚಿಕರ. ಚಪಾತಿ, ರೊಟ್ಟಿ, ದೋಸೆಗೆ ಬೆಸ್ಟ್. (ಖಾರ ಮಸಾಲೆ ಹಾಕದೆಯೂ ಮಾಡಬಹುದು.) ಇದೇ ಸಿಪ್ಪೆಯಿಂದ ರೊಟ್ಟಿ, ದೋಸೆ ಸಹ ಮಾಡಬಹುದು.

-ರತ್ನಾ ಕೆ.ಭಟ್ ತಲಂಜೇರಿ