ಕಲ್ಲತ್ತಗಿರಿಯ ರೋಚಕ ಪಯಣ...

ಕಲ್ಲತ್ತಗಿರಿಯ ರೋಚಕ ಪಯಣ...

   

               ನಿಸರ್ಗದ  ಮಡಿಲಿನ  ಅಭೂತಪೂರ್ವ  ಅನುಭವ  ಕಥನ..... ಜಿಟಿ ಜಿಟಿ ಎ೦ದು ಬೀಳುವ  ಮಳೆ ಸೊ೦ಯ್ಯನೆ  ಬೀಸುವ   ಗಾಳಿ..,ಅತಿ ಎತ್ತೆರದ  ಮರಗಳ  ಕೆಳಗೆ..ಒಮ್ಮೆ ಕಲ್ಪನೆ ಮಾಡಿಕೊ೦ಡು ಓದಿ..

ಇಲ್ಲಿಗೆ ಒಂದು ವರ್ಷದ ಹಿಂದೆ ನಾನು ನನ್ನ ಸ್ನೇಹಿತರು ಕಲ್ಲತ್ತಗಿರಿಗೆ ಹೋಗಿದ್ದ ರೋಮಾಂಚನಕಾರಿ ಪಯಣದ ಬಗ್ಗೆ ಬರೆಯುತಿದ್ದೇನೆ. ಅದು 2೦11 ಜುಲೈ ಮೊದಲನೇ ವಾರ. ಅಂದು ಭಾನುವಾರ ಆದ್ದರಿಂದ ನಾವೆಲ್ಲ ಕಲ್ಲತ್ತಗಿರಿಗೆ ಹೋಗಿದ್ದೆವು.ಕಲ್ಲತ್ತಗಿರಿಯಲ್ಲಿ ದೇವರ ದರ್ಶನವೆಲ್ಲ ಮುಗಿದಮೇಲೆ ನಾವು ಬೆಟ್ಟದ ಮೇಲಿನಿಂದ ಹರಿಯುವ ಜಲಪಾತದ ನೀರಿನ ಮೂಲ ಹುಡುಕುತ್ತ ಹೊರೆಟೆವು..ಆಗ ಮಳೆ ಬೀಳುವ ಕಾಲವಾದ್ದರಿಂದ ಮಳೆ ಹನಿಯುತಿತ್ತು. ನಾವೆಲ್ಲ ಆ ಕೆಸರು ರಾಡಿನ ನೆಲದ ಮೇಲೆ ಹೆಜ್ಜೆಯೂರುತ್ತ ಪಕ್ಕದ ಕಾಫಿ  ತೊಟದ ಮುಖಾಂತರ ಹೊರೆಟೆವು. ಹಾಗೆ ಒಂದು ಚೂರು ದೂರ ಹೊರಟಾಗ ಮತ್ತೆ ಝರಿ ಹರಿಯುತಿತ್ತು. ಹಾಗೆ ಆ ಮುಂದೆ ಕಾಫಿ ತೋಟದ ದಾರಿ ನಮಗೆ ಮುಂದುವರೆಯಲು ದೂರ ಅನಿಸಿದ ಕಾರಣ ಆ ಝರಿಯ ಹರಿವಿಗೆ ವಿರುದ್ದವಾಗಿ ಪಾಚಿ ಕಟ್ಟಿದ ಕಲ್ಲು ಬಂಡೆಗಳ ಮೇಲೆ ಸಾಗಿದೆವು.ನಮಗೆಲ್ಲ ಎಲ್ಲಿ ಜಾರಿ ಬೀಳುವೆವೊ ಎಂಬ ಭಯ ಬೇರೆ. ಹೀಗೆ ಒಮ್ಮೆ ಯರಿ ಏರಿ ಒಮ್ಮೆ ಕಾಫಿ ತೋಟದ ದಾರಿ ಎರಡು ನಡುವೆ ಸಾಗಿ ಬಂದೆವು.ದಾರಿಯಲ್ಲಿ ಕಡಿದಾದ ಬಂಡೆ ಏರಿ ಜಾರಿ ಕಾಡು. ಹೊಕ್ಕು ಆಚೀಚೆ ಕಾಫಿ ತೋಟದ ಮಧ್ಯೆ ತೂರಿ ಹೋಗುತಿದ್ದೆವು. ಮುಂಗಾರು ಮಳೆ ಹನಿ ಜೋರಾಗತೊಡಗಿತ್ತು. ಆ ಎತ್ತರದ ಮರಗಳ ನಡುವೆ  ಚಿಟಪಟ ಸದ್ದು  ಕೇಳುತಿತ್ತು.

ಅಷ್ಟರಲ್ಲೇ ಒಂದು ಕಿತ್ತಳೆ ಮರ ಕಂಡಿತು ಎಲ್ಲರು ಮನಸೋ ಇಚ್ಛೆ ತಿಂದೆವು. ಅದನ್ನು ತಿನ್ನಲು ನಮಗೆ ಭಯ ಏಕೆಂದರೆ ಕಾಫಿ ತೋಟದ ಯಜಮಾನರುಗಳು ಕಾಯಲು ಚೌಡಿ

ಮಾಡಿಸಿ ಬಿಟ್ಟಿರುತ್ತಾರೆ ಯಾರಾದರು ಏನಾದರು ತಿಂದರೆ ಅವರು ರಕ್ತಕಾರಿ ಸಾಯುತ್ತಾರೆಂಬ ಮೂಢ ನಂಬಿಕೆ.

ಅದನ್ನೆಲ್ಲ ಲೆಕ್ಕ ತೆಗೆದುಕೊಳ್ಳದೆ ನಾವು ಮುಂದುವರೆದೆವು. ನಮಗೆ ಮುಂದೆ ಎರಡು ಮೂರು ಕಾಲ್ಸೇತುವೆ ಸಿಕ್ಕವು .ಅದೆಲ್ಲ ದಾಟಿ ಪ್ರಕೃತಿಯ ಮಡಿಲ ಆಳಕ್ಕೆ

ಇಳಿದು ಸಾಗಿದೆವು ಮುಂದೆ ನಮಗೆ ಜಲಲ ಧಾರೆ ಯೊಂದು ಎದುರಾಯಿತು.ಅದೇ ಯಾರೂ ನೋಡಲು ಸಾಧ್ಯಾವಾಗಿರದ ಹೆಚ್ಚು ಜನ ನೋಡಿರದ ದೊಡ್ಡದಾದ ಗುಡ್ಡದ ತುತ್ತ ತುದಿಯಿ೦ದ ಧುಮ್ಮಿಕ್ಕುವ ಜಲಪಾತ..ಅದನ್ನು ನೋಡಿ ನಾವೆಲ್ಲ ರೋಮಾ೦ಚಿತರಾದೆವು..ಆದರೆ ಅದು ನಮಗಿ೦ತ ಸ್ವಲ್ಪ ದೂರದಲ್ಲಿತ್ತು..ನಾವು ಇಲ್ಲಿ೦ದಲೇ ಅದನ್ನು   ನೋಡಿ ಸ೦ತಸಪಟ್ಟೆವು..ನಾವಿಬ್ಬರು ಸ್ನೇಹಿತರು ಇಲ್ಲಿಂದ ಮುಂದೆ ಹೋಗೊದು ಅಪಾಯ ಎಂದು

ಹಿಂತಿರುಗಿದೆವು. ನಮ್ಮ ಮಾತು ಕೇಳದ ಇನ್ನಿಬ್ಬರು ಇನ್ನು ಮುಂದೆ ಸಾಗಿ  ಹತ್ತಿರ ಹೋಗಿ ನೋಡಿಕೊ೦ಡು ಬರುತ್ತೇವೆ ಎ೦ದು ಹೋದರು.. ನಾವು ಹಿ೦ತಿರುಗೆ ಮತ್ತೆ ಕಾಫಿ ತೋಟತದಿಒದ  ಕೆಳಗೆ ಇಳಿಯುವಾಗ ಕೆಲ ಸಮಯ ದಾರಿ ತಪ್ಪಿಬಿಟ್ಟೆವು.  ಮಳೆ ಬೇರೆ ಜೋರಾಗ ತೊಡಗಿತ್ತು

ಅಂತೂ ಹೇಗೋ ಏನೋ ಅಲ್ಲಿ ಇಲ್ಲಿ ಸುತ್ತಿ ನಾವಿಬ್ಬರು ಮತ್ತೆ ದೇವಾಲಯದ ಬಳಿ ಇಳಿದು ಬಂದೆವು. ಇನ್ನುಳಿದಬ್ಬಿರು ಒಂದು ಘಂಟೆಯ ನಂತರ ಬಂದು ನಮ್ಮನ್ನು

ಸೇರಿಕೊಂಡರು. ಅವರು ಜಲಪಾತದ ಕೆಳಗೆ ಹೋಗಿದ್ದೆವು ಎಂದು ನಮ್ಮ ಬಳಿ ಹೇಳಿಕೊಂಡರು.ಇನ್ನೊ೦ದು ಪ್ರಮುಖ ವಿಷಯ ಏನೆ೦ದರೆ ನಾವು ಅಲ್ಲಿಗೆ ಹೋಗಿ ಬ೦ದ ನ೦ತರ ನಾವು ಅಲ್ಲಿಗೆ ಹೋಗಿದ್ದೆ ತಪ್ಪು ಎ೦ದು ಬೈದರು.ಏಕೆ೦ದರೆ ಅಲ್ಲಿಗೆ ಹೋದವರು ಯಾರು ವಾಪಸ್ ಬ೦ದಿಲ್ಲವ೦ತೆ....ಆದರೆ ನಾವು ಬ೦ದಿಲ್ಲವೆ..ಇದೇ ಇರಬೇಕು ಮೂಢ ನ೦ಬಿಕೆ ಎ೦ದರೆ..  ಆ ನಂತರ ನಾವು ನಮ್ಮ ಊರುಗಳಿಗೆ ಹೊರೆಟೆವು..ಆದರೆ ಅಲ್ಲಿನ  ಅವಿಸ್ಮರಣೀಯ  ನೆನಪುಗಳು ಇನ್ನು ಹಸಿರಾಗೆ ಇವೆ..

ಆನ೦ತರ  ಅಲ್ಲಿ ಚಿತ್ರೀಕರಿಸಿದ  ವೀಡಿಯೋ ತುಣುಕುಗಳನ್ನು  ಅಪ್ಲೋಡ್  ಮಾಡಿ ಲಿ೦ಕ್  ಕೊಡುತ್ತೇನೆ  ನೋಡಿ......ಇಲ್ಲಿ ಪ್ರಕಟಿಸಿರುವ  ಫೋಟೋಗಳು ಅಲ್ಲಿ ತೆಗೆದ  ನೈಜ  ಚಿತ್ರಗಳು..ಇದುವರೆಗು ಇದನ್ನು ಯಾರು ನೋಡಿರಲು  ಸಾಧ್ಯವಿಲ್ಲ  ಹಾಗೂ ಎಲ್ಲಿಯೂ ನಿವು ನೋಡಿರಲು ಸಾಧ್ಯವಿಲ್ಲ  ಏಕೆ೦ದರೆ ಅಲ್ಲಿ ಆ  ಜಲಪಾತದ  ಬಳಿಗೆ ಹೋಗೋದು ಬಹಳ  ಕಡಿಮೆ ಜನರು ಹಾಗೂ ಅದರಲ್ಲಿ ನಾವು ಒಬ್ಬರು..

ಗಮನಿಸಿಃ ಜಲಪಾತಕ್ಕೆ ಹೋಗಲು ಯಾವುದೇ ರೀತಿಯ  ಕಾಲುದಾರಿಯು ಇಲ್ಲ  ಹಾಗಾಗಿ ಅದರ  ಬಳಿ ಹೋಉವುದು ಅತ್ಯ೦ತ  ಅಪಾಯ..ದಯವಿಟ್ಟು ಯಾರು ಅದರ  ಬಳಿ ಹೋಗುವ  ದುಸ್ಸಾಹಸ  ಮಾಡಬೇಡಿ.... 

Comments