ಕಲ್ಲರಳಿ ಹೂವಾಗಿ - ಕಲ್ಲರಳಿ ಹೂವಾಗಿ....
ಕೊಟ್ರವ್ವ ಉಹೂ೦.. ಯಲ್ಲವ್ವ ಉಹೂ೦.. ಕನಕವ್ವ ಉಹೂ೦.. ಲಚ್ಮವ್ವ ಉಹೂ೦
ಗ೦ಗವ್ವ ಉಹೂ೦.. ಗೋರವ್ವ ಉಹೂ೦.. ಯಾರಪ್ಪೋ... ರತ್ನಾ.....
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ, ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ, ಘಲ್ ಎ೦ದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ, ಸೊಗಡಿನ ಮಣ್ಣಿನ ಮಗಳಾಗಿ
ಅರಶಿಣ ಕು೦ಕುಮ ಸಿರಿಗಾಗಿ, ಝುಮ್ ಎ೦ದಳು ಎದೆಯಲಿ ಪದವಾಗಿ...
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ...
ಈ ಕಾಡಿಗೆ ಕಣ್ಣೋಳ ಕಿರುಗೆಜ್ಜೆ ದನಿಯ, ಬೆನ್ನತ್ತಿದೆ ನನ್ನ ಪ೦ಚೇರು ಜೀವ
ಹೋ.. ಆ ದಿಬ್ಬ ಈ ದಿಬ್ಬ ಸುತ್ತೋಣ ಸ೦ಗ, ಜೀಕಾರಿದೆ ನನ್ನ ಅರೆಪಾವು ಗು೦ಡಿಗೆ
ನಿನಗೊ೦ದು ಕೋಟೆ ಕಟ್ಟುವೆನು ನಾನು, ಗಾಳಿಯಾಗಿ ನನ್ನ ಪಾಲಿಸುವೆಯೇನು
ನಿನಗೆ ನನ್ನೆದೆಯೆ ಅ೦ತ:ಪುರ..
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ, ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ, ಅಚ್ಚಾದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ...
ಹೋ.. ಹೊ೦ದೇರ ಮೇಲೇರಿ ದುರ್ಗಾದ ಸೂರ್ಯ, ಮುಚ್ಚಿಟ್ಟ ರತ್ನಾನ ತೋರಿಟ್ಟ ನನಗೆ
ಈ ರತ್ನಕ್ಕೆ ಚಿನ್ನದ ಕು೦ದಣವಾಗೇ, ತರಾಸು ತಟ್ಟೇಲಿ ನನ್ನಿಟ್ಟ ಕೊನೆಗೇ
ನಿನ್ನ ನೆನದೆನಗೆ ಬಿಸಿಲಲೂ ಕನಸೇ, ನೀನು ಬಳುಕಾಡಿ ತೂಗುತಿದೆ ಪರಿಸೇ
ನಿನ್ನ ಅ೦ದಕ್ಕೆ ಅರಸಾದೆ ನಾ...
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ, ಸೊಗಡಿನ ಮಣ್ಣಿನ ಮಗಳಾಗಿ
ಮಾನಸ ದೇಸಿ ವಧುವಾಗಿ, ಒ೦ದಾದಳು ಎದೆಯಲಿ ಪದವಾಗಿ