ಕಲ್ಲರಳಿ ಹೂವಾಗಿ - ನನ್ನ ನೆಚ್ಚಿನ ಕೋಟೆಯಾ

ಕಲ್ಲರಳಿ ಹೂವಾಗಿ - ನನ್ನ ನೆಚ್ಚಿನ ಕೋಟೆಯಾ

ಬರಹ

ನನ್ನ ನೆಚ್ಚಿನ ಕೋಟೆಯಾ, ಹೃದಯ ಸೇರುವ ದಾರಿಯಾ
ಗುಟ್ಟು ಬಲ್ಲೆನು, ನಾನು ಜಾಣೆ
ನನ್ನ ನೆಚ್ಚಿನ ಹೆಣ್ಣಿನ, ಹೃದಯ ಸೇರುವ ಕಣ್ಣಿನಾ
ದಾರಿ ಯಾವುದೋ, ನಾನು ಕಾಣೆ
ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ, ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ

ನೀನು ಒಪ್ಪಿದರೆ ನಲ್ಮೆಯ ಹಬ್ಬಾ, ನಾವು ಕೂಡಿದರೆ ದುರ್ಗವೇ ಸಗ್ಗಾ

ನನ್ನ ನೆಚ್ಚಿನ ಕೋಟೆಯಾ, ಹೃದಯ ಸೇರುವ ದಾರಿಯಾ
ಗುಟ್ಟು ಬಲ್ಲೆನು, ನಾನು ಜಾಣೆ
ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ, ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ

ನನ್ನ ಮೊದಲನೇ ಮಾತಿದು, ಏನು ಹೇಳುವುದೋ ತಿಳಿಯದು
ನನ್ನ ಮನಸಿನ ಆಸೆಯು, ನೀನು ಬಯಸಿದರೆ ತಿಳಿವುದು
ಆ ಮೌನದ ಶಶಿಯಲ್ಲಿ ನಾ, ಬೆಳದಿ೦ಗಳು ಎದೆಯಲೀ ಇಳಿದಿದೆ
ನಿಶ್ಯಬ್ದದ ಈ ಶಶಿ ಕಿರಣವು, ನಿನ್ನೊಲವಿನ ಶಬ್ದವ ನುಡಿಸಿದೆ

ನನ್ನ ನೆಚ್ಚಿನ ಕೋಟೆಯಾ, ಹೃದಯ ಸೇರುವ ದಾರಿಯಾ
ಗುಟ್ಟು ಬಲ್ಲೆನು, ನಾನು ಜಾಣೆ
ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ, ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ

ನಿನ್ನ ನಗುವಿನ ಒಡಲಿನ, ಒಲ್ಲ ನೋವಿಗೂ ಸಮ್ಮತ
ನನು ಬೇಡುವುದು ಸ್ವರ್ಗವೇ, ಇರಲಿ ಬದುಕಿಗೆ ಒಮ್ಮತ
ಬ೦ಗಾರದ ಈ ಬಾಳನು, ಬೇಕಿದ್ದರೆ ಬೆ೦ಕಿಯೇ ಬೆಳಗಲಿ
ಬದಲಾಗದ ನಮ್ಮೆದುರಲಿ, ಆ ಋತುಗಳೇ ಹುಟ್ಟಿಯೇ ಹೋಗಲಿ

ನನ್ನ ನೆಚ್ಚಿನ ಕೋಟೆಯಾ, ಹೃದಯ ಸೇರುವ ದಾರಿಯಾ
ಗುಟ್ಟು ಬಲ್ಲೆನು, ನಾನು ಜಾಣೆ
ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ, ಹೇಳೆ ರತ್ನಾ ಅಕ್ಕರೆಯೊಲವಿನ ಮಾತ್ನಾ