ಕಲ್ಲರಳಿ ಹೂವಾಗಿ - ನನ್ನ ನೆನಪಿನಲಿ

ಕಲ್ಲರಳಿ ಹೂವಾಗಿ - ನನ್ನ ನೆನಪಿನಲಿ

ಬರಹ

ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ.. ಹೋ..
ನಿನ್ನ ನೆನಪಿನಲಿ ನನ್ನ ಬದುಕಿರಲಿ, ನೆನಪೇ ಬದುಕು ಕೊನೆಗೇ..
ಮೊದಲ ಸ್ಪರ್ಷಗಳ ನೆನೆಯೋಣ, ಬೆಟ್ಟಗಳಿಗೆ ಎದೆ ಬಿರಿಯೋಣ..
ಬರಲಿ ವಿಧಿ ಬರಲಿ ವಿಧಿ ಬರಲಿ, ನಮ್ಮೀ ನೆನಪಿನ ಲೋಕಕೆ ಕಾಲಿಡಲೀ ನೋಡೋಣ

ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ.. ಹೋ..

ಏಳೇಳು ಸಾವಿರ ಸುತ್ತಿನ ಕೋಟೆ ಕಟ್ಟಿಕೊಳ್ಳುವ, ಮನದ ಸುಮದ ಹಾಲ್ಗಲ್ಗಳಿ೦ದ
ಸಾವಿಲ್ಲದ ನೆನಪುಗಳನ್ನು ಕೊನೆಯತನಕ ಆಳುವ ಹೃದಯ ನಡೆಸೋ ಒಡ್ಡೋಲಗದಿ೦ದ
ಖುದಾ ಕೀ ಕಸ೦...., ಪ್ಯಾರ್ ಪ್ಯಾರ್ ಹೀ ರಹಾ..

ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ.. ಹೋ..

ಜಗವನ್ನೇ ಅಕ್ಕರೆಯಿ೦ದ ಕಾಣುತೀವಿ ನಾವು ಒಲವ ಗೆಲುವ ಕಾಲನೇನು ಬಲ್ಲಾ..
ಕರಗದ ಚ೦ದಿರನಿರುವ ನಮ್ಮೆದೆಯ ಬಾನಲಿ ಕರಗುವ ಕಾಲನು ಕನಸನೇನು ಬಲ್ಲಾ
ದೂರ ಇದ್ದರೂ.. ಇದ್ದರೂ.. ಮನಸಿಗು೦ಟು ನ೦ಟು
ಹೂಗಳೊಡನೆ ಮಾತಾಡೋಣಾ.. ಜಗದ ಅಣುಕುಗಳಿಗೆ ಕಿವುಡಾಗೋಣಾ..
ಬರಲಿ ವಿಧಿ ಬರಲಿ ವಿಧಿ ಬರಲಿ, ನಮ್ಮೀ ನೆನಪಿನ ಲೋಕಕೆ ಕಾಲಿಡಲೀ ನೋಡೋಣ

ನಿನ್ನ ನೆನಪಿನಲಿ ನನ್ನ ಉಸಿರಿರಲಿ, ನೆನಪೇ ಬದುಕು ನಮಗೇ..