ಕಲ್ಲು ಮುಳ್ಳಿನ ಹಾದಿ

ಕಲ್ಲು ಮುಳ್ಳಿನ ಹಾದಿ

ಕವನ

ಬಾನಲಿ ಸೂರ್ಯನ ಹೊನ್ನಿನ ಕಿರಣವು

ಮಾನಿನಿಗಿತ್ತಿತೆ ಭರವಸೆಯ

ಕಾನನ ನಡುವಿನ ಹಾದಿಯ ಬಳಸುತ

ಯಾನಕೆ ಸೊಗಸಿನ ಈ ಸಮಯ

 

ಚೆಲುವಿನ ಕಾಡಿನ ನಡುವಿನ ಹಾದಿಯ

ಚಿಲಿಪಿಲಿ ನಾದವು ಸ್ಚಾಗತಕೆ

ಕಲರವ ನೀಡುವ ಪಕ್ಷಿಯ ಕಾಣದು

ಎಲೆಗಳ ಪರದೆಯು ಇದೆ ಅದಕೆ

 

ಲಲನೆಯು ನಡೆವಳು ರಸ್ತೆಯ ನಡುವಲಿ

ಗೆಲುವಿನ ಭರವಸೆ ಇರುವಂತೇ

ಚಲಿಸಲು ಅಡೆತಡೆ ಕಲ್ಲಿದೆ ಮುಳ್ಳಿದೆ

ಕೆಳಗಡೆಗೆಳೆಯುವ ಜನರಂತೇ

 

ಬಿಚ್ಚಿದ ಕೂದಲು ಕಟ್ಟಲು ಮರೆತಳೆ

ಹೆಚ್ಚಿದ ಅವಸರ ಕಾರಣವೆ?

ಕೆಚ್ಚೆದೆ ನಾರಿಯು ಗುರಿಯನು ತಲುಪಲಿ

ಮೆಚ್ಚುಗೆ ಆಕೆಗೆ ಕಳುಹಿಸಲೆ?||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್