ಕಳಚಿ ಬಿದ್ದ ಕನಸಿನ ಮಹಲು..!

ಕಳಚಿ ಬಿದ್ದ ಕನಸಿನ ಮಹಲು..!

ಳೇ ಸಾಲುಗಳ ಹಂಗು ಬಿಟ್ಟು. ಹೊಸ ಭಾವಗಳತ್ತ ಮನಸ್ಸು ತುಡಿಯುತ್ತಿದೆ. ಆ ಒಂದು ಸೆಳೆತದಲ್ಲಿ ಇಲ್ಲೊಂದಿಷ್ಟು ಬರೆಯುತ್ತಿದ್ದೇನೆ. ಓದಿ ಖುಷಿಯಾದ್ರೆ, ನನ್ನಗೂ ಏನೋ ಸಂತೋಷ. ಏನೋ ಹೊಸ ಉಲ್ಲಾಸ...

ನನ್ನಲ್ಲೂ ಒಬ್ಬ ಹುಚ್ಚನಿದ್ದಾನೆ.

ಈತ ಕೆಲವೊಮ್ಮೆ ನಾಲಿಗೆ ತುದಿಗೆ ಬಂದು ಕುಳಿತು ಕೊಳ್ಳುತ್ತಾನೆ.
ತುಟಿಯ ಹತ್ತಿರವೇ ಬಂದು ಹೊರಬರಲು ತವಕಿಸುತ್ತಾನೆ. 
ಆಗ ನಾನು ಹೇಳೋದು ಒಂದೇ. ಸುಮ್ಮನಿರೂ ಗೆಳೆಯ.

ಹೊರಗಿನ ಮಂದಿ ನಿನ್ನ ಹುಚ್ಚಾ ಅಂತ ಹೇಳಿಬಿಟ್ಟಾರು.
ನನ್ನ..ನಿನ್ನ ಹುಚ್ಚತನ ನಮ್ಮಲಿಯೇ ಇರಲಿ. ಹೀಗೆ ಹೇಳುತ್ತೇನೆ.

ಇದು ಕೆಟ್ಟ ಪ್ರಪಂಚ ಸತ್ಯ ಹೇಳಿದರೆ, ಅದು ಹುಚ್ಚುತನದ
ದಂತೆ ಕೇಳಿಸುತ್ತದೆ. ಸುಮ್ಮ ನೀರು ಗೆಳೆಯ ಅಂತ ಬೇಡುತ್ತೇನೆ.

ಮತ್ತೆ..ಮತ್ತೆ ತಿದ್ದುತ್ತೇನೆ.ತೀಡುತ್ತೇನೆ. ಆತ ಕೇಳೋದೇಯಿಲ್ಲ.
ಇದ್ಯಾವ ಹುಚ್ಚೋ ತಿಳಿಯುತ್ತಿಲ್ಲ..

****

ರಾತ್ರಿಯ ಶೂನ್ಯ ವೇಳೆ. ಆಕೆಯ ನೆನಪು ಕಾಡುತ್ತದೆ.
ಚೇಡಿಸುತ್ತದೆ. ಚೆಲ್ಲಾಟವನ್ನೂ ಆಡುತ್ತದೆ.

ಮುಂಜಾನೆ ಎದ್ದಾಗ ಆಕೆ ಪಕ್ಕದಲ್ಲಿಯೇ ಇರುತ್ತಾಳೆ.
ರಾತ್ರಿ ಕಾಡಿರೋ ಭಾವಗಳು ಆಗ ಕಂಡಿತ ಮೂಡೋದಿಲ್ಲ.

****

ಸವಿ ಸುಮ್ಮನೇ ಒಲವ..
ನಿಭಾಯಿಸು ಸುಮ್ಮನೆ ಗೆಳತನವ..

****

ಬಾನಲಿ ಬಂಗಾರದ ಬಣ್ಣ ಮೂಡಿದೆ.
ಅಲ್ಲೆಲ್ಲೋ ಗುಡುಗಿನ ಸದ್ದು.
ಇಲ್ಲೆಲ್ಲೋ ಮಳೆಯ ಸೂಚನೆ.

****

ಚಂದ್ರ ಮೂಡಿದ. ಎದುರು ಮನೆ
ಪುಟ್ಟಿ ಎಚ್ಚರಗೊಂಡು, ಆಟವಾಡುತ್ತಿದ್ದಾಳೆ.

****
ರವಿ ನನ್ನ ಗೆಳೆಯ
ಚಂದ್ರ ಅವಳ ಸ್ನೇಹಿತ
ಯಾಕೋ ನಾವು ದೂರವಾಗಿದ್ದೇವೆ.

****

ರಾಜಾ-ರಾಣಿ.ಚೆಂದ-ಅಂದ.
ನೋಟ-ಆಟ. ಕಳಚಿ ಬಿತ್ತು,
ಕನಸಿನ ಮಹಲು.
ಈಗ ಅವರು ಬೀದಿ ಪಾಲು.

***

-ರೇವನ್ 

Comments

Submitted by venkatb83 Tue, 05/14/2013 - 22:35

In reply to by kavinagaraj

ಚುಟುಕಗಳು ಎನ್ನಲೇ? ಸಿಂಪಲ್ ಮತ್ತು ಸಖತ್ ಮಾರಾರೆ ....! ಎಲ್ಲವೂ ಸೂಪರ್ ..ಸರಳವಾಗಿದ್ದು ಶಾರ್ಟ್ ಎನ್ ಸ್ವೀಟ್ ಆಗಿವೆ.... ಶುಭವಾಗಲಿ.. \|