ಕಳಲೆ(ಕಣಿಲೆ)

ಕಳಲೆ(ಕಣಿಲೆ)

ಬರಹ

ನಿಮಗೆಲ್ಲಾ ಬಿದಿರು ಬಗ್ಗೆ ಗೊತ್ತೇ ಇದೆ.
ಜಗತ್ತಿನಲ್ಲಿ ಅತ್ಯಧಿಕ ವೇಗದಲ್ಲಿ ಬೆಳೆಯುವ ಗಿಡವೇ ಬಿದಿರು.
(ಸಂ- ವಂಶ, ಹಿಂ-ಬಾಂಸ್, ಇಂ-Bamboo)
ವಿಷಯುಕ್ತ(ಸಯನೈಡ್!) ಎಳೆ ಬಿದುರಿನಿಂದ ಸಾಂಬಾರ್,ಪಲ್ಯ,ಉಪ್ಪಿನಕಾಯಿ ಮಾಡುವರು!

ಈ ಎಳೇ ಬಿದುರಿಗೆ ಕಳಲೆ (ತುಳುವಲ್ಲಿ ಕಣಿಲೆ) ಎನ್ನುವರು. ೨ ವಾರದಷ್ಟು ಎಳೆಯ ಅಥವಾ ೧-೨ ಅಡಿ ಬೆಳೆದಿರುವ ಕಳಲೆ (bamboo shoot) ಜೂನಿಂದ ಸೆಪ್ಟೆಂಬರ್‌ವರೆಗೆ ಮಾರ್ಕೆಟ್‌ನಲ್ಲಿ ಸಿಗುವುದು. ಇದರ ಸಿಪ್ಪೆ ತೆಗೆದು, ಉರುಟುರುಟಾಗಿ ಕತ್ತರಿಸಿ, ನೀರಲ್ಲಿ ೩ ದಿನ ಮುಳುಗಿಸಿಡಬೇಕು. ದಿನವೂ ನೀರು ಬದಲಾಯಿಸಬೇಕು. ಇದರಿಂದ ಅದರ ವಿಷ ನಿವಾರಣೆಯಾಗುವುದು.

ಈ ಕಣಿಲೆ ತುಂಡುಗಳೊಂದಿಗೆ, ಚೇಟ್ಲ( ಎಳೆ ಕೆಸುವಿನ ಎಲೆಯನ್ನು ಸುತ್ತಿ
ಗಂಟು ಹಾಕಿದ್ದು), ಹೆಸರು ಕಾಳು, ಸೌತೆಕಾಯಿ ಸೇರಿಸಿ ಸಾಂಬಾರ್ ಮಾಡಿದರೆ.. ಆಹಾ..