ಕಳೆದು ಹೋಗುವ ಮುನ್ನ...

ಕಳೆದು ಹೋಗುವ ಮುನ್ನ...

ಕವನ

ಜನರೊಳಗಿನ ಬೇಕು ಬೇಡವ

ತಿಳಿದು ಯೋಜನೆ ಮಾಡಿರೊ

ಕರವ ಹೇರುತ ಬಡವ ಬೀದಿಗೆ

ಬರುವ ರೀತಿಯು ಬೇಡವೊ

 

ದೇಶ ನಾಡಲಿ ಬದುಕು ದುಸ್ತರ

ಭರತ ಮಾತೆಗೆ ತಿಳಿಯದೆ

ನಮ್ಮ ಸಲಹುವ ಮಂದಿಗದುವೆ

ತಿಳಿವು ಮೂಡದೆ ಹೋಯಿತೆ

 

ಜಾತಿ ಬೇಡವು ನೀತಿ ಬೇಕದು

ತತ್ವಯಿಂದದು ಸತ್ತಿತೆ

ಗುರಿಯುಯಿಲ್ಲದ ಸೇವೆ ಜನಕದು

ಪ್ರಾಣ ಹಾರುತ ಹೋಯಿತೆ

 

ಉಳ್ಳ ಜನಕೇ ಬುವಿಯ ಸ್ವತ್ತದು

ಸಣ್ಣ ರೈತಗೆ ದಕ್ಕಿತೆ

ಹೀಗೆಯಾದರೆ ನೆಲವು ಸರಿಯುತ

ಪರರ ಕೈಗದು ಸೇರದೆ

***

ಬಾ ಎನ್ನ ಬೆಳಕೇ ಹೀಗೆ…

ಬಾ ಎನ್ನ ಬೆಳಕೇ ಹೀಗೆ

ನನ್ನೊಳಗೆ ನೀನೂ ಸೇರೆಯಾ

 

ಹಸಿರೆಲೆಯ ಕುಣಿಸಿ ನೀನು

ಉಸಿರಾಗಿ ಬಾರೆಯಾ

ತರಗೆಲೆಯ ಜೊತೆಗೇ ಆಡಿ

ಹಿತವಾಗಿ ತೋರೆಯಾ

ಸಪ್ತಪದಿ ತುಳಿಯುತಲಿರಲು

ತಂಪಾಗಿ ಹರಸೆಯಾ

ನನ್ನ ಒಲವೇ ನನ್ನ ಗೆಲುವೇ ತಾರೆಯೇ

 

ಇಂಪಾದ ಸಂಗೀತ

ಸುತ್ತಲೂ ಹರಡೆಯಾ

ಜೀವನದ ಕನಸುಗಳ

ಜೀವದೊಳು ಕಾಣೆಯಾ

ಬಾನಿನ ಬಯಲಿನಲಿ

ಹೊಸಗನಸ ಚೆಲ್ಲೆಯಾ

ನನ್ನ ಒಲವೇ ಎನ್ನ ಗೆಲುವೇ ತಾರೆಯೇ

 

ರಾತ್ರಿ ಚಂದ್ರಮನ ತಂಪ

ಮನೆಯೊಳಗೆ ತಂದೆಯಾ

ಹಾಲಿನ ತುಂಬೆಲ್ಲ

ತುಂಬುತ್ತಾ ನಿಂದೆಯಾ

ಮೋಹವನು ಚೆಲ್ಲುತ್ತಾ

ಹಿತವಾಗಿ ನಕ್ಕೆಯಾ

ನನ್ನ ಒಲವೇ ಎನ್ನ ಗೆಲುವೇ ತಾರೆಯೇ

 

ಕೈಹಿಡಿದು ನನ್ನನ್ನೂ

ಒಲವಿಂದ ತಬ್ಬಿದೆಯಾ

ಕಣ್ಣಲ್ಲಿ ಕಣ್ಣಾ ಬೆರೆಸಿ

ಮುತ್ತನಿಂದು ನಿಡಿದೆಯಾ

ಹೊಸಭಾವ ಹೊಸತನದಿ

ನನ್ನನ್ನು ಅಪ್ಪಿದೆಯಾ

ನನ್ನ ಒಲವೇ ಎನ್ನ ಗೆಲುವೇ ತಾರೆಯೇ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್