ಕಳ್ಳಾಟ

ಕಳ್ಳಾಟ

ಕಳ್ಳಾಟ

ಬಾಗಿಲ ಹಿಂದೆ ಕಾಯುತ್ತಾ ನಿಂತ ಕಳ್ಳನಿಗೆ

ಈ ಮನೆಯಲ್ಲಿ ಏನೇನಿವೆ ಎಂದು ಗೊತ್ತು.

ಕಳ್ಳ ಕಾಯುತ್ತಿದ್ದಾನೆ, ಕಾಯುತ್ತಲೇ ಇದ್ದಾನೆ

ಮನೆಯ ಯಜಮಾನ ಮಲಗಲೆಂದು.

ಯಜಮಾನನೋ, ಕಳ್ಳ ಒಳ ಬರಲೆಂದೆ

ತನ್ನ ಮನೆಯ ಬಾಗಿಲನು ತೆರೆದಿರಿಸಿ

ಎಚ್ಚರದಿಂದಲೇ ಕಾಯುತ್ತಿದ್ದಾನೆ

ಮನೆಯಲ್ಲಿರುವುದಕ್ಕೆ ಬೇಸತ್ತು.

ಎಚ್ಚೆತ್ತ ಇವನಂತೂ ಮಲಗುವುದಿಲ್ಲ...

ಕಾಯುತ್ತಿರುವ ಅವನೂ ಬರುವುದಿಲ್ಲ....

ಅರಿವು-ಮರೆವುಗಳ ಜೂಟಾಟದಲ್ಲಿ

ಈ ಕಾಯುವಿಕೆಗೆ ಅಂತ್ಯವೆಲ್ಲಿ!?

 

Comments