ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)
ಪುಟ್ಟನ ನಾಯಿಮರಿ
ನಾಯಿಯೊಂದು ಓಡಿಬಂದು
ಕಲ್ಲ ಮೇಲೆ ಕುಳಿತು ಕೊಂಡು
ಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು|
ಬೀದಿ ನಾಯಿ ಎಲ್ಲ ಸೇರಿ
ಬಾಲಎಳೆದು ಕಿವಿಯ ಕಚ್ಚಿ
ಹಿಂದೆ ಮುಂದೆ ಸೇರಿ ಅದನು ಕಾಡತೊಡಗಲು|
ಗೆಳೆಯರೊಡನೆ ಆಡುತಿದ್ದ
ಮುದ್ದು ಪುಟ್ಟ ಓಡಿಬಂದು
ಕಲ್ಲು ಎಸೆದು ಎಲ್ಲ ನಾಯ ದೂರ ಕಳಿಸಿದ|
ನಾಯಿಮರಿಯ ತಲೆಯ ಸವರಿ
ಎರಡು ಕೈಲಿ ಎತ್ತಿ ಹಿಡಿದು
ಮನೆಯದೆಲ್ಲಿ ಏಕೆ ಇಲ್ಲಿ ಬಂದೆ ಎಂದನು |
ತನ್ನ ಒಡೆಯ ತನ್ನ ತೊರೆದ
ಬೀದಿಯಲ್ಲಿ ನೂಕಿ ಹೋದ
ಎಂದು ನುಡಿದು ಮರಿಯು ಕಣ್ಣ ನೀರ ಸುರಿಸಿತು|
ಕೊರಗ ಬೇಡ ಮರಿಯೆ ನಿನ್ನ
ನನ್ನ ಮನೆಗೆ ಓಯ್ವೆನೆಂದು
ಪುಟ್ಟ ಮರಿಯ ಕಣ್ಣ ನೀರ ತಾನು ಒರೆಸಿದ|
ಗೆಳೆಯರೊಡನೆ ಕೂಡಿಕೊಂಡು
ನಾಯ ಕೊರಳಿಗೊಂದು ದಾರ ಕಟ್ಟಿ
ಮನೆಗೆ ಓಯ್ದು ಒಳಗೆ ಗಿಡದ ಬುಡಕ್ಕೆ ಕಟ್ಟಿದ|
ಎಲ್ಲಿ ತಂದೆ ಇದನು ಮೊದಲು
ಹೊರಗೆ ಕಳಿಸು ಎಂದು ನುಡಿದ
ತಾಯಿ ಅವನ ಕರೆದು ಬೆನ್ನ ಮೇಲೆ ಹೊಡೆದಳು|
ಮರಿಯ ಹೊರಗೆ ದೂಡೆ ತನಗೆ
ರಾತ್ರಿ ಊಟ ಬೇಡವೆಂದು
ಬಿಡದೆ ಚಂಡಿ ಹಿಡಿದ ಪುಟ್ಟ ಹೊರಗೆ ಕುಳಿತನು|
ಮಗನ ಹಿಡಿದ ಹಟವ ಕಂಡು
ಹೊರಗೆ ಬಂದೆ ಅವನ ತಂದೆ
ಮರಿಯು ಇರಲಿ ಒಳಗೆ ಬರಲಿ ಎಂದು ನುಡಿದನು|
ತಂದೆ ನುಡಿದ ಮಾತು ಕೇಳಿ
ಬಿಂಕದಿಂದ ತಾಯ ನೋಡಿ
ಮರಿಯ ಹೊತ್ತು ಕುಣಿದ ಪುಟ್ಟ ಒಳಗೆ ನಡೆದನು||
ಸೂಚನೆ: ಇದನ್ನು ತಿರುಕನೋರ್ವ ಊರಮುಂದೆ/ಕಾಗೆಯೊಂದು ಹಾರಿಬಂದು ಎನ್ನುವ ಪದ್ಯದ ರೀತಿ ಓದಿಕೊಳ್ಳಬಹುದು
(ಶ್ರೀ ರಘುರವರ ಚೀಲದಲ್ಲಿ ಕೈಹಾಕಿ ತೆಗೆದುಕೊಂಡಿರುವ ಶೈಲಿ ಆದ್ದರಿಂದ ಅವರು ಕ್ಷಮಿಸಬೇಕು)
Comments
ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)
In reply to ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ) by gopaljsr
ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)
ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)
In reply to ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ) by raghumuliya
ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)
ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)
In reply to ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ) by nagarathnavina…
ಉ: ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)