ಕವನ ಹುಟ್ಟುವುದು

ಕವನ ಹುಟ್ಟುವುದು

ಕವನ

ಕವನ ಹುಟ್ಟುವುದು
ಕಡಲಷ್ಟು ಕಲ್ಪನೆಗಳು
ಕಣ್ಮುಂದೆ ಕಲೆತು
ಕದಡಿದಾಗ
ಕಾಮನೆಗಳ ಕಾರ್ಮೋಡ
ಕೈಹಿಡಿದು ಕರೆದು
ಕುಡಿಸಿದಾಗ !

ಕವನ ಹುಟ್ಟುವುದು
ಕನಸುಗಳ ಕೋಟೆಯಲಿ
ಕಣ್ಣಿಗೆ ಕಗ್ಗತ್ತಲು
ಕವಿದಾಗ
ಕಣ್ತೆರೆದು ಕಮಲಮುಖಿಯ
ಕಲಾಪ ಕಂಡು
ಕನವರಿಸಿದಾಗ !