ಕವನ

ಕವನ

ಬರಹ

ದಿನವೆಲ್ಲಾ ಭೂಮಿಯನ್ನು ಬೆಳಗಿದ ಸೂರ್ಯ
ಮೋಡದಂಚಿನಲಿ ಮರೆಯಾಗುತ್ತಿರಲು

ಮನಸಿನ ಪುಟಗಳಲ್ಲಿ ಮೂಡಿದ ಪದ ಪುಂಜವೊಂದು
ಕವನವಾಗಿ ಹೊರಹೊಮ್ಮುತಿದೆ

ಈ ಮುಂಜಾವಿನಲಿ ಒಲಾಡುವ ಮರದ ಎಲೆಗಳ ಮಧ್ಯೆದಿಂದ
ತೂರಿಕೊಂಡು ಬಂದು ಸೆರುವ  ಸೂರ್ಯನ ಕಿರಣಗಳ ಹಾಗೆ

ಮನಸಿನಲ್ಲಿಯ ಭಾವನೆಯೆಂಬ ಕಿರಣಗಳು ಶಬ್ಧಗಳ ರೂಪದಿಂದ
ಹೊರ ಬಂದು  ಕವನವಾಗಿ ಮೂಡುತಿವೆ ಬಿಳಿ ಹಾಳೆಯ ಮೇಲೆ