ಕವನ By chitta on Wed, 08/03/2005 - 21:09 ಬರಹ ವಿಷಯವೇಕೆ ಕವನಕೆ ಮನದ ಭಾವ ರೂಪಕೆ ಹೆಪ್ಪುಗಟ್ಟಿ ಕೂತ ನೆನಪು ಚೆಲುವಿಗಿರುವ ಆ ಒನಪು ಕಾಣುತಿರುವ ಹಗಲುಗನಸು ಕಂಡ ಕನಸು ಆದ ನನಸು ಆಗದಿರಲು ಬಂದ ಮುನಿಸು ಪ್ರಕೃತಿಯ ಈ ಸೊಗಸು ಎಲ್ಲ ಕುಳಿತು ಎದೆಯಲಿ ಇಟ್ಟರೊಮ್ಮೆ ಕಚಗುಳಿ ಕೊಟ್ಟಂತೆಯೆ ಆಹ್ವಾನ ಬರೆಯಲೊಂದು ಕವನ