"ಕವಲು" ದಾರಿ

"ಕವಲು" ದಾರಿ

ಬರಹ

ಸವೆದ ಹಾದಿಯಲ್ಲಿ ಬರಿ ಸಂಕಷ್ಟಗಳೆ ಬಂದವು
ಎಡರು ತೊಡರುಗಳೆನ್ನದೆ ಬಂದೆ
ಸಾಗದ ಜೀವನವನ್ನು ಸಾಗಿಸಿ ಬಂದೆ
ಒಂದೇ ದಾರಿಯಲ್ಲಿ ವೇಗವಾಗಿ ಬಂದೆ.....

ಆ ಹಾದಿಯಲ್ಲಿ ಬರುವಾಗ ಚುಚ್ಚಿದ
ಕಲ್ಲು ಮುಳ್ಳುಗಳೆಲ್ಲ ನನ್ನ ಶತ್ರುಗಳಂತೆ ಕಂಡೆ
ಹಾದಿಯಮದ್ಯದಲ್ಲಿ ಕೆಲವರು ಹೊವುಗಳಂತೆ ಕಂಡರು
ಅವರೆಲ್ಲ ನನ್ನ ಸ್ನೆಹಿತರೆಂದು ಬಾವಿಸಿದೆ.......

ಮುಂದೆ ಬರುವ ತಿರುವುಗಳನೆಂದು ಯೊಚಿಸಿಲ್ಲ
ಹಿಂದೆ ಹೋದ ತಿರುವುಗಳು ಲೆಕ್ಕಕ್ಕಿಲ್ಲ.
ಹಾಗಂತ ಹೆದರಿ ಅಡ್ಡ ದಾರಿಯಲ್ಲಿ
ಹೊಗುವುದು ಇಷ್ಟವಿಲ್ಲ..............

ಇಷ್ಟೇಲ್ಲ ಕಠಿಣ ಸವಾಲುಗಳನ್ನು
ಹೆದುರಿಸಿದ ನನ್ನಗೆ ಮುಂದೆ ಸಾಗಲಾಗುತ್ತಿಲ್ಲ
ಏಕೆಂದರೆ ಮುಂದೆ ಇರುವುದು
"ಕವಲು" ದಾರಿ ಎತ್ತ ಹೊದರು ಕಷ್ಟ
ಎರಡು ದಾರಿಯಲ್ಲಿ ಸಿಗುವ ಸುಖ ದುಃಖಗಳು ಅಗೊಚರ......

ಬೇಡವೆಂದು ಹಿಂದೆ ಓಡಲು ಸಾದ್ಯವಿಲ್ಲ
ಆಗಂತ ಸುಮ್ಮನೆ ಕೊತರೆ ಮುಂದಿನ
ನನ್ನ ಗುರಿಯನು ತಲುಪಲಾಗುವುದಿಲ್ಲವಲ್ಲ
ಆದರಿಂದ ನನ್ನ ಮುಂದಿನ ಹೆಜ್ಜೆ ತುಂಬ ಮುಖ್ಯವಾಗಿದೆ.....

ಆದರೆ ಮನಸು ಎರಡಕ್ಕು ಸೈ ಅನ್ನುತಿದೆ
ಎರಡು ದೋಣಿಮೇಲಿನ ಪಯಣದಂತೆ
ಅದು ಸಾದ್ಯವಿಲ್ಲವಲ್ಲ ಸಾಗಿದರೆ ಒಂದೇ ದಾರಿ
ಜೀವನದ ಪಯಣ ಮುಗಿಯುವವರೆಗು...............

ಕೆಲವುರು "ಈ" ದಾರಿ ಸರಿ ಎಂದಾಗ
ಮನಸ್ಸು ಒಂದು ಕ್ಷಣ ಯೊಚಿಸಿ "ಆ" ದಾರಿ ಎನ್ನುತ್ತದೆ
ಇಂತಹ "ಕವಲು" ಹೊಡೆದಿರುವ ಜೀವನ
ಹೇಗೆ ಕೊನೆ ತಲುಪುದೊ ಎಂಬ ಬೀತಿ ನನ್ನಲಿ ತುಂಬಿದೆ........