ಕವಿತೆಯಾಗದ ಸಾಲುಗಳು....!

ಕವಿತೆಯಾಗದ ಸಾಲುಗಳು....!

ತುಂಬಾ ದಿನ ಆಯ್ತು. ಬರೆದು. ಏನೋ ಬರೀ ಬೇಕು ಅಂತ ಅನಿಸಿತು. ಸಾಲುಗಳು ಹುಟ್ಟಿದವು. ಬರೆದಿದ್ದೇನೆ. ಸಾಲು..ಸಾಲಾಗಿ. ಓದಿ. ಖುಷಿಯಾದ್ರೆ  ತಿಳಿಸಿ..

ಭಾವ ಸರೋವದರದಲ್ಲಿ ಅಲೆಗಳ ಅಬ್ಬರ ಕಡಿಮೆ ಆಗಿದೆ
ಭಾವ ತೀರಕ್ಕೆ ಅಲೆಗಳಿಂದ ಎದ್ದು ನಡೆದು ಬಂದ ಅವಳು
ಕಣ್ಮುಂದೆ ಹಾಡು ಹೋದಳು. ಯಾರವಳು....? ಗೊತ್ತಿಲ್ಲ..
ಪ್ರೀತಿ ಹುಟ್ಟಿದ ತಕ್ಷಣ ಅವಳ ಹಿಂದೆನೇ ಸಾಗಿದೆ...
---
ನನ್ನ ಪ್ರೀತಿಯ ಹುಡುಗಿ. ಬಂದಳು..ಹೋದಳು..
ಎಲ್ಲಿಗೆ ಅಂತ ನಾ ಕೇಳಲಿಲ್ಲ..ಅವಳು ಹೇಳಲೇ ಇಲ್ಲ...
---
ಚಲುವೆ ನಿನ್ನ ನೋಡಲು. ಬಂದವ್ರು ಕುರುಡರಾದರು
ನಿನ್ನ ಪ್ರಖರ ಸೌಂದರ್ಯಕ್ಕೆ ಮರುಳಾದರು..
---
ಯಾರು ನೀನು.. ನನ್ನ ಹೃದಯದಲ್ಲಿ ನೆಲಸಿದೆ. ಅವಳು
ಹೋಗುವವರೆಗೂ ಕಾಯಬಾರದೇ...
---
ಬೆಳಗ್ಗೆಯಿಂದ ಖುಷಿ.ಸಂಜೆ ಖಿನ್ನ ಭಾವ. ರಾತ್ರಿ ಭಾವ
ತೀವ್ರತೆ. ಅಲ್ಲಿಗೆ ಹಾಳಾಗಿದ್ದು ನಾನು ಮತ್ತು ಅವಳು..
---
ಒಲವು ಪದ ಬಿಟ್ಟು. ಬೇರೆ ಇಲ್ಲವೇ..
ಒಳ್ಳೆ ಭಾವ ಬಣ್ಣಿಸಲು...
---
ನನ್ನಾಕೆ ಸುಂದರಿ ಅಲ್ಲ. ಹೃದಯ ಶ್ರೀಮಂತಿಕೆ
ಕಮ್ಮಿಯಿಲ್ಲ... ಭಾವನೆಗಳು ಆಗೊಮ್ಮೆ..ಈಗೊಮ್ಮೆ
ಆಚೆ-ಈಚೆ ಆಗುತ್ತವೆ. ಅಷ್ಟೇ..
---
ನಲಿಯೋಣ..ಕುಣಿಯೋಣ.. ಅದನ್ನ ಮಾಡಲು ಮಕ್ಕಳಿಲ್ಲ.
ಈ ವಯಸ್ಸಿನಲ್ಲೂ. ಇಳಿ ವಯಸ್ಸಿನಲ್ಲೂ ನಾವೇ ಮಾಡೋಣ.
ನಾವೇ ಖುಷಿ ಪಡೋಣ..
---
ನಗುವ ಹಾದಿ. ಅಳುವ ಸೋಲು. ನಮ್ಮ ಮಧ್ಯೆ ಇರೋ
ಆ ಚಂದ್ರನ ಮೇಲೆ ಆಣೆ. ನಾನೆಂದು ದು:ಖ ಅಂತ ಎದೆ
ಗುಂದೋದಿಲ್ಲ...
---
ಸದಾ ನಿನ್ನ ನೆನಪು. ಜೇಡದಂತೆ ಕಣ್ಣಲ್ಲಿ ಕನಸು ಕಟ್ಟುತ್ತದೆ .
ಆದರೂ ನಾನು ಸ್ಪೈಡರ್ಮ್ಯಾನ್ ಅಲ್ಲ...
---
ಅವಳು ನನ್ನವಳು.ಯಾಕೋ ಆಗಾಗ ಹೆಂಡ್ತಿ ಥರ ಆಡ್ತಾಳೆ...
---
ದೇಹದ ಒತ್ತಡ ತೃಪ್ತವಾಗಿದೆ. ಮನಸ್ಸು ಹಗುರವಾಗಿದೆ.
ಕವಿತೆ ಅನ್ನೋ ಥರದ ಸಾಲುಗಳು ಸಾಗುತ್ತಿವೆ. ಹೃದಯ
ಹೊಸ ಚಿಂತನೆಗೆ ಮುಕ್ತಗೊಳ್ಳುತ್ತಿದೆ.
---
ನಮ್ಮ ಮನೆ ಮುಂದೆ. ಒಂದು ಕಾಗೆ ಬರುತ್ತದೆ. ಕೂಗುತ್ತದೆ.
ಕರ್ಕಶವಾಗಿ. ಯಾರೂ ಬರೋದಿಲ್ಲ. ಹೊಡೆದು ಓಡಿಸೋಕೆ.
ಕೂಗು ಕೇಳಿ ಬೇರೆ ಕಾಗೆಗಳೂ ಬರೋದಿಲ್ಲ...ಆದರೂ
ಕಾಗೆ ಬರೋದು ಬಿಟ್ಟಿಲ್ಲ..
----
ನನ್ನವಳು ಕೊಬ್ಬು ಕರಗಿಸಿದ್ದಾಳೆ. ಹಾಗಂತ ನನಗೆ ಅನಿಸುತ್ತಿಲ್ಲ.
ಅದನ್ನ ಅವಳೇ ಅಂದು ಕೊಂಡಿದ್ದಾಳೆ.
---
ರೆಕ್ಕೆ ಕಿತ್ತ ಹಕ್ಕಿ..ನಂಬಿಕೆ ಕಳೆದು ಕೊಂಡ ಪ್ರೀತಿ...
ಎರಡೂ ಒಂದೇ..ಅದು ಹಾರೋದಿಲ್ಲ...
ಇದು ಮುಂದೆ ಸಾಗೋದಿಲ್ಲ...
---
ಒಲವಿನ ಬಳಕು..ನನ್ನಲ್ಲಿ ಸದಾ ಸೂಸುತ್ತದೆ..
ಅವಳು ಅದರ ಹೊಳಪಲ್ಲಿ ಹೊಸ ಕನಸು
ಹೆಣೆಯುತ್ತಿದ್ದಾಳೆ. ನನಗಾಗಿ..
---
-ರೇವನ್...

Comments