ಕವಿತೆ ಎಂದರೆ..
ಕವನ
ಕವಿತೆ ಎಂದರೆ ಮೊಗ್ಗು,
ಹಗೆಯೆ ಬಿಟ್ಟಿದ್ದರೆ ಅರಳಿ
ನಿಲ್ಲುವ ಹೂ ಕಾವ್ಯ,
ಸಂಜೆ ಹೊತ್ತಿಗೆ ಮಾಗಿ
ಕಾದಂಬರಿಯಾಗೊ ಹೇಗೊ
ವಿಕಸನದ ಪಾಠಕ್ಕೆ
ಉದಾಹರಣೆಯಾಗಿ
ಮರುದಿನಕ್ಕೆ ಉದುರುವ ಚುಟುಕು..
ಕವಿತೆ ಎಂದರೆ ಕಲ್ಲು ತನ್ನ
ಶ್ರದ್ಧೆಗೆ ಬದ್ದಳಾಗಿ
ರೂಪುಗೊಂಡ ಮಣ್ಣು,
ಶತನಮಾನಗಳ ಕ್ರೋಧ,
ಅಸಹನೆಗಳ ಕವಿತೆ ಕಾವ್ಯ.
ಕಾದಂಬರಿ, ಚುಟುಕ ಹೊತ್ತು
ಹಡೆಯದೆ ನಿಂತ ನಿತ್ಯ ಬಸುರಿ..
ಕವಿತೆ ಎಂದರೆ
ಉಸಿರು ಟಿಸಿರೊಡೆದು
ಇದ್ದುದ್ದಕ್ಕೆ, ಇರದುದ್ದಕ್ಕೆ,
ಬಿಟ್ಟ ನಿಟ್ಟುಸಿರು,
ಈ ಜಗದ ಮುಂದೆ ಬೆತ್ತಲಾದುದಕ್ಕೆ
ಕಣ್ಣು ಮುಚ್ಚಿ ಮೈ ಸವರಿದ
ಹೇಸಿಗರ ಮೊಸಲೆ ಕಣ್ಣೀರು..
ಶಿವಪ್ರಸಾದ್. ಎಸ್.ಪಿ.ಎಸ್
Comments
ಉ: ಕವಿತೆ ಎಂದರೆ..
In reply to ಉ: ಕವಿತೆ ಎಂದರೆ.. by mmshaik
ಉ: ಕವಿತೆ ಎಂದರೆ..