ಕವಿತೆ- ಕನ್ನಡ

ಕವಿತೆ- ಕನ್ನಡ

ಬರಹ

ಕವಿತೆ ಬರೆಯಲೆಂದು ಲೇಖನಿ ಕಾಗದ

ಹಿಡಿದು ಪೂರ್ವಸಿದ್ದತೆಯಲ್ಲಿ ಕುಳಿತರೆ

ರಚನೆಯಾಗಲ್ಲ ಕವನ !

ಅದೇ , ಅದರ ಮುಹೂರ್ತ ಕೂಡಿ ಬಂದರೆ

ಅದು ಉದಯವಾಗುವುದನ್ನು ತಡೆಯುವವರಾರು

ಕೈಯಲ್ಲಿ ಲೇಖನಿ ಇರಲಿ ,ಇಲ್ಲದಿರಲಿ !

 


ಕನ್ನಡ ಕನ್ನಡ ಕನ್ನಡವೆಂದರೆ

ಅರಳುವುದು ನನ್ನ ನಯನ .

ಕನ್ನಡ ಕನ್ನದವೆನ್ದೆನಿಸುವುದು 

ನಿತ್ಯವೂ ನನ್ನ ಮನ .

 

ದ್ವಿಸಹಸ್ರ ಇತಿಹಾಸ ಇದೆ 

ಸಿಕ್ಕಿಲ್ಲ ಅರ್ಹ ತಾಣ

ಕಾರಣವೇನೆಂದು ತಿಳಿಯಲಿ ,

ಮೆಚ್ಚಿಲ್ಲವೇ ಇದನು ಪೌರನು