ಕವಿತೆ ಕರಗಿದಾಗ...

ಕವಿತೆ ಕರಗಿದಾಗ...

ಕವನ

ಬಾಳು ಕವಿತೆಯಾಗಲಿಲ್ಲ

ಕವಿತೆ ಜೊತೆಗೆ ಸಾಗಲಿಲ್ಲ

ಕವನವೆನುವ ಗೂಡಿನಲ್ಲಿ ಹೊಗೆಯ ಕಂಡೆನೆ 

ಕ್ರಾಂತಿ ಆಗಲೆಂದು ಬರೆದೆ

ಬ್ರಾಂತಿಯೊಳಗೆ ಸೇರಿ ಹೋದೆ

ಶಾಂತಿ ಇರದ ಮನಸ್ಸನಿಂದ ಕರಗಿ ಹೋದೆನೆ

 

ಚಿತ್ರ ನೋಡಿ ಚಿತ್ತ ಕಲಕಿ

ಅತ್ತ ಇತ್ತ ಸೆಳೆಯುವಾಗ

ಭ್ರಮೆಯ ಆಚೆ ಏನು ಇದೆಯೊ ತಿಳಿಯದಾದೆನೆ

ದಾರಿಯಿರದ ನೆಲದ ಮೇಲೆ

ದಾರಿಮಾಡಿಕೊಂಡು ನಡೆದೆ

ಬಾರಿ ಬಾರಿ ನೋವನುಂಡು ಸಾಗಿಹೋದೆನೆ

 

ಉಪ್ಪುಕಾರ ಹುಳಿಯ ತಿಂದು

ಬೆಳೆದ ದೇಹ ಇದುವುಯೆಂದು

ಮತ್ತೆ ಮತ್ತೆ ಹೇಳುತಿರಲು ಗೆಲುವು ಕಂಡೆನೆ

ಜೀತಮುಕ್ತ ನಡೆಯ ಜೊತೆಗೆ

ಸಾಗುತಿರಲಿ ಬದುಕು ಹೀಗೆ

ಯಾರ ಸನಿಹ ಹೇಗೆ ಇಹೆನೊ ನಾನು ಅರಿಯೆನೆ

 

- ಹಾ ಮ ಸತೀಶ, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

 

ಚಿತ್ರ್