ಕವಿಯಾಗುತ್ತಿರುವೆ ನಿನ್ನ ನೆನೆ ನೆನೆದು
ಬರಹ
ಎಲ್ಲಿರುವೆ ಓ ನನ್ನ ಮನದರಸಿ ಬಂದೆ ನೀ ಕನಸಿನಲಿ..
ಹೃದಯದ ಕದವನ್ನು ತಟ್ಟದೆ ಒಳಗೆ ಬಂದು ಕುಳಿತೆ ನೀ...
ಕನಸಿನಲ್ಲಿ ಬಂದಾದ ಮೇಲೆ ನಿನದೆ ಕನವರಿಕೆ ದಿನವೂ...
ಕನಸೆಂದು ತಿಳಿದರೂ ನಿನ್ನನೆ ಬಯಸುತಿದೆ ಮನವು...
ಮಳೆಗಾಲದ ಮುಸ್ಸಂಜೆಯಲಿ ಕಡಲ ಕಿನಾರೆಯಲಿ..
ನಿನ್ನೊಡನೆ ಕೈ ಕೈ ಹಿಡಿದು ನಡೆಯುವ ಹಂಬಲ...
ಕಾಯಕ ಮುಗಿಸಿ ಹೊರಟಿರುವ ಕೆಂಪು ಸೂರ್ಯನ ನೋಡುವ ಆಸೆ...
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮರಳಿನಲ್ಲಿ ಆಡುವ ಆಸೆ...
ಏನೆಂದು ಹೇಳಲಿ ನಾ ನನ್ನ ಚಂಚಲ ಮನಸಿಗೆ..
ಕವಿಯಾಗುತ್ತಿರುವೆ ನಿನ್ನ ನೆನೆ ನೆನೆದು ಇತ್ತೀಚಿಗೆ...
ಪ್ರತೀ ಬಾರಿ ಕನಸಲ್ಲೇ ಬರುವೆ ಏಕೆ??
ಬರಬಾರದೇ ನೀ ಎದುರಲ್ಲೊಮ್ಮೆ...
ಬಂದರೆ ನೀ ಸೋತುಬಿಡುವೆ ಎನ್ನುವ ಭಯವೇ...
ಬಿಡು ಭಯವ ಆಗಲೇ ನಾ ನಿನಗೆ ದಾಸನಾಗಿರುವೆ