ಕವಿಯಾಗೊ ಸಮಯ

ಕವಿಯಾಗೊ ಸಮಯ

ಕವನ

ಬಂದಿದೆ ಬಂದಿದೆ ವೃತ್ತಿಯ ಸಂಜೆ

ತಂದಿದೆ ತಂದಿದೆ ಖುಷಿಯ ಮುಂದೆ 

 

ಬೋಧನ ವೃತ್ತಿಯಲಿ ಸಂದ್ಯಾಕಾಲ 

ಅದುವೇ ಕವಿಯಾಗೊ ಪುಣ್ಯಕಾಲ 

ಅನುಭವ ಅನುಭಾವ ಸೇರೊ ಕಾಲ 

ಕವನ ಕವಿತೆ ಬರೆಯಲು ಒಳ್ಳೆಕಾಲ

 

ಮನಗೆ ಮುದ ನೀಡೊ ಕಾಯಕ

ಓದು ಬರಹ ಮಾಡೊ ಭೋದಕ 

ಕಾವ್ಯಕಜ್ಜಗಳ ರಚಿಸೊ ಶೋಧಕ 

ಪದ್ಯ ಗದ್ಯಗಳ ಓದುವ ನಾಯಕ

 

ಸೇವೆ ಸಾಧನೆಯ  ನೆನಪೇ ಆನಂದ

ಪಡೆಯೊ ನೀ ಅದರಲಿ ಅತ್ಮಾನಂದ

ಬೋಧಕಗೆ ಕವಿತ್ವವೆ ಪರಮಾನಂದ

ಗೀತೆ ಕಾವ್ಯ ಸಾಹಿತ್ಯವೆ ಬ್ರಹ್ಮಾನಂದ

 

ಬಾಲ್ಯ ಮಿತ್ರರ ಸೇರೊ ಯಶಸ್ಸು

ಮಂದಿರ ಆಲಯ ನೋಡೊ ವಯಸ್ಸು

ಮೊಮ್ಮೊಕ್ಕಳ ಜೊತೆ ಆಡೊ ತಪಸ್ಸು 

ಗೆಳೆಯರ ಜೊತೆ ಹರಟೊ ಶ್ರೇಯಸ್ಸು 

 

ಚೆಲುವಿನ ತಾಣಕೆ ಒಲವಿನ ಯಾತ್ರೆ

ಸತಿಪತಿ ಜೊತೆಯಲಿ ನಲಿಯುವ ಜಾತ್ರೆ 

ಉತ್ತಮ ಅರೋಗ್ಯಕೆ ಎರೆಡು ಮಾತ್ರೆ 

ದಿನದಿನದ ಊಟಕೆ ಸಣ್ಣಸಣ್ಣ ಪಾತ್ರೆ

 

-ಬಂದ್ರಳ್ಳಿ ಚಂದ್ರು, ತುಮಕೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್