ಕವಿ ಮನ
ಕವನ
ಒಡಲೊಳಗಿನ ಕೂಗು
ಕೇಳಿಸಲೆ ಇಲ್ಲಾ.
ತಂಗಾಳಿಯಲಿ ಪಾಲು
ಈ ಕವಿಗೆ ಇಲ್ಲಾ.
ಮೌನ ಕರೆದಲ್ಲೆಲ್ಲಾ
ಓಡಿ ಹೋದನು ಕವಿಯು
ಮೌನಗೀತೆಯಾಗಿ
ಬಾಡಿ ಹೋದನು ಕವಿಯು.
ಗಗನಕ್ಕೆ ಮುಖ ಮಾಡಿ
ನಗುತಿರಲು ತಾರೆ
ಹಿಗ್ಗಿ ನೋಡಿದರಲ್ಲಿ
ಭರವಸೆಯೆ ಮಾಯೆ.
ಏನಿದ್ದರೇನಂತೆ
ಹಣವಿಲ್ಲದವಗೆ
ಅದು ಬರುವ ಗಳಿಗೆ
ಇವ ಮಣ್ಣಿನೊಳಗೆ
-------ಉಮೇಶ ಮುಂಡಳ್ಳಿ ಭಟ್ಕಳ 9945840552