ಕಸ್ತೂರಿ ನಿವಾಸದ ಬಣ್ಣದ ಅಧ್ಯಾಯ ಶುರು....!
ಡಾಕ್ಟರ್ ರಾಜ್ ಅಭಿನಯದ ಕಸ್ತೂರಿ ನಿವಾಸ. ಶ್ರೀಮಂತ ರವಿ ವರ್ಮ ಪಾತ್ರಕ್ಕೆ ಜೀವ ತುಂಬಿದ ರಾಜ್. ಜಯಂತಿ-ಆರತಿಯಂತಹ ನಟಿಯರ ಅಭಿನಯ. ಪಿ.ಬಿ.ಎಸ್.ಹಾಡಿದ ‘ಆಡಿಸಿ ನೋಡು..ಬೀಳಿಸಿ ನೋಡು’ ಫಿಲೋಸಫಿಕಲ್ ಗೀತೆ. ದೊರೈ-ಭಗವಾನ್ ನಿರ್ದೇಶನದ ಸಿನಿಮಾ. 1971 ರಲ್ಲಿ ರಿಲೀಸ್. ಕಪ್ಪು-ಬಿಳುಪಿನಲ್ಲಿಯೇ ತೆರೆಗೆ. 2014-ನವಂಬರ್ -07 ರಂದು ಮತ್ತೆ ರಿಲೀಸ್. 43 ವರ್ಷದ ತೆರೆ ಕಂಡ ಕಸ್ತೂರಿ ನಿವಾಸ. ಮೊದಲ ದಿನವೇ ಚಿತ್ರಕ್ಕೆ ಒಳ್ಳೆ ಓಪನಿಂಗ್. ಕ್ಲಾಸಿಕ್ ಚಿತ್ರಗಳ ಜಿ.ಕೆ.ವೆಂಕಟೇಶ್ ಸಂಗೀತದ ಮಾಂತ್ರಿಕ ಸ್ಪರ್ಶ. ಕನ್ನಡದ ಕಸ್ತೂರಿ ನಿವಾಸ ಬಣ್ಣದ ಅಧ್ಯಾಯ ಮತ್ತೆ ಶುರು..
ಬಣ್ಣದ ಬದುಕಿನಲ್ಲಿದ್ದರೂ ಬಣ್ಣ ಕಾಣದೇ ತೆರೆಗೆ ಬಂದಿತ್ತು ಕನ್ನಡದ ಕಸ್ತೂರಿ ನಿವಾಸ. ಆದರೆ, ಇದೇ ನಿವಾಸಕ್ಕೆ ಈಗ ಹೊಸ ಹೊಳಪು ಬಂದಿದೆ. ಬಣ್ಣದ ವಿಶೇಷ ಲೇಪನದಿಂದ ಕಂಗೊಳಿಸುತ್ತಿದೆ. ಹೌದು..! ಅಂತ ನಾವು ಹೇಳ್ತಿಲ್ಲ. ಮೊದಲ ದಿನ ಕಲರ್ ನಲ್ಲಿ ಕಸ್ತೂರಿ ನಿವಾಸ ಚಿತ್ರ ನೋಡಿದವ್ರು ಹೇಳ್ತಾರೆ.
ಕಸ್ತೂರಿ ನಿವಾಸದ ರವಿ ವರ್ಮ ಮತ್ತೆ ಕಾಡ್ತಿದ್ದಾರೆ.ಕಪ್ಪು-ಬಿಳುಪಿನ ದಿನಗಳಲ್ಲಿಯೇ ಕಸ್ತೂರಿ ನಿವಾಸ ವಂಶದ ರವಿ ಮನ ತಟ್ಟಿದ್ದರು. ಹೃದಯದಲ್ಲಿ ಆದರ್ಶವನ್ನ ಬಿಟ್ಟುಹೋಗಿದ್ದರು. ಹಾಗೆ ಬಿಟ್ಟು ಹೋಗಿ ಈಗ 43 ವರ್ಷಗಳೇ ಕಳೆದು ಹೋಗಿವೆ. ಆದರೆ, ಅದೇ ರವಿ ಮತ್ತೆ ಬಂದಿದ್ದಾರೆ. 1971 ರಲ್ಲಿ ಬೆಳ್ಳಿ ತೆರೆಗೆ ಬಂದು ಕನ್ನಡಿಗರ ಎದೆಯಲ್ಲಿ ಕಸ್ತೂರಿ ನಿವಾಸದ ಪರಿಮಳ ಬೀರಿದ್ದರು....
ಹೌದು..! ಕಸ್ತೂರಿ ನಿವಾದ ನಾಯಕ ನಟ ಡಾಕ್ಟರ್ ರಾಜ್ ಬಗ್ಗೇನೆ ಹೇಳ್ತಿರೋದು. ಸ್ಲಿಮ್ ದೇಹ. ಸ್ಟೈಲಿಸ್ ನಡಿಗೆ. ಹಣವಂತನ ಗತ್ತಿಲ್ಲದ ಗುಣಗಳು. ಹಾಗೆ ಇನ್ನೂ ಹೇಳ್ತಾ ಹೋದರೆ, ತುಂಬಾ ಇದೆ. ತನ್ನದೆಲ್ಲವನ್ನೂ ಕಳೆದು ಕೊಂಡರೂ, ಧಾನ-ಧರ್ಮ ಮಾಡೋ ವಿಶಾಲವಾದ ಆದರ್ಶ ಪ್ರಾಯ ಗುಣವಂತೂ ಎಲ್ಲರಿಗೂ ಇಷ್ಟವಾಗುತ್ತದೆ...
ಕಸ್ತೂರಿ ನಿವಾಸ ದಂತಹ ಕನ್ನಡದ ಕ್ಲಾಸಿಕ್ ಚಿತ್ರವನ್ನ ಕಲರ್ ನಲ್ಲಿ ನೋಡೋ ಅವಕಾಸ ಸಿಕ್ಕಿದೆ. ನಿಜ, ಕನ್ನಡಿಗರಿಗೆ ಇದು ದೊಡ್ಡ ಭಾಗವೇ ಸರಿ. ಕಪ್ಪು-ಬಿಳುಪಿನಲ್ಲಿಯೇ, ರಾಜ್ಕುಮಾರ್ ಅಭಿನಯವನ್ನ ಕಂಡು ಮಂತ್ರಮುಗ್ಧಗೊಂಡ ಪ್ರೇಕ್ಷಕರಿಗೆ ಅದೇ ರಾಜ್ ಕುಮಾರ್ ಸುಂದರವಾಗಿ ಕಾಣಿಸಿದ್ದಾರೆ. ಆಗಲೂ ಚೆಂದನೇ ಇದ್ದರು ಬಿಡಿ ರಾಜ್ ಕುಮಾರ್. ಅದೇ ರಾಜ್ ಕುಮಾರ್ ಅಭಿನಯಕ್ಕೆ ಇನ್ನಷ್ಟು ಹೊಲಪು ಬಂದಿದೆ ಈ ಕಲರ್ ಕಸ್ತೂರಿ ನಿವಾಸದಲ್ಲಿ. ರಾಜ್ ಅವರ ಕಾಸ್ಟೂಮ್ ಗಳನ್ನ ಅನುಕರಿಸೋ ಅಭಿಮಾನಿಗಳಿಗೆ ರಾಜ್ ಯಾವ ಬಣ್ಣದ ಬಟ್ಟೆ ದರಿಸಿದ್ದರು ಅಂತ ಆಗ ಹೆಚ್ಚೇನೂ ತಿಳಿಯುತ್ತಿರಲಿಲ್ಲ. ಅದು ಈ ಕಲರ್ ನಲ್ಲಿ ಸ್ಪಷ್ಟವಾಗಿ ಕಣ್ಣಿಗೆ ಕಟ್ಟುತ್ತದೆ..
ರಾಜ್ ಜೊತೆಗೆ ಆರತಿ ಮತ್ತು ಭಾರತಿ ಅಭಿನಯಿಸಿದ್ದರು. ಇವರ ಅಭಿನಯಕ್ಕೂ ಇಲ್ಲಿ ಮತ್ತಷ್ಟು ಬಣ್ಣ ಬಂದಿದೆ. ಚಾರ್ಮ ಕಂಡು ಬರುತ್ತದೆ. ಸುಂದರವಾಗಿಯೂ ಮತ್ತಷ್ಟು...ಇನ್ನಷ್ಟು ಸೆಳೆದು ಬಿಡ್ತಾರೆ, ಈ ನಾಯಕ ನಟಿಯರು. ಸುಮಾರು ನಾಲ್ಕು ವರ್ಷದಿಂದಲೂ ಕಸ್ತೂರಿ ನಿವಾಸ ಚಿತ್ರವನ್ನ ಕಲರ್ ಮಾಡಬೇಕೆಂದು ಕನಸ್ಸು ಕಂಡವರು ನಿರ್ಮಾಪಕ ಕೆ.ಸಿ.ಎನ್. ಗೌಡರು. ಆದರೆ, ಅದು ಅಷ್ಟು ಬೇಗ ಆಗೋ ಕೆಲಸವಲ್ಲ. ಆದರೂ, ಬಿಟ್ಟು ಬಿಡದೇನೆ, ಕಸ್ತೂರಿ ನಿವಾಸ ಚಿತ್ರವನ್ನ ಕಲರ್ ಮಾಡೋಕೆ ಹೊರಟರು ಕೆ.ಸಿ.ಎನ್.ಗೌಡರು.ಅದು ಪೂರ್ಣಗೊಳ್ಳೋ ಮೊದಲೇ ನಿಧನರಾದರು ಗೌಡರು. ಕನಸು ಅಲ್ಲಿಗೆ ಅಪೂರ್ಣ. ಆ ಅಪೂರ್ಣ ಕೆಲಸವನ್ನ ಗೌಡರ ಕಿರಿಯ ಪುತ್ರ ಕೆ.ಸಿ.ಎನ್.ಮೋಹನ್ ಪೂರ್ಣ ಮಾಡಿದ್ದಾರೆ. ಸರಿ ಸುಮಾರು 70 ಥಿಯೇಟರ್ ನಲ್ಲಿ ಕಸ್ತೂರಿ ನಿವಾಸ ರಿಲೀಸ್ ಆಗಿದೆ...
ಕಸ್ತೂರಿ ನಿವಾಸಕ್ಕೆ ಈಗಲೂ ಬೇಡಿಕೆ....!
ಕಸ್ತೂರಿ ನಿವಾಸ ಚಿತ್ರದ ಕತೆಯ ಗಟ್ಟಿತನವೇ ಹಾಗಿದೆ. ತನಗೋಸ್ಕರ ಬದುಕದೇನೆ, ಪರರ ಸಂತೋಷಕ್ಕಾಗಿ ಜೀವಿಸೋ ರಾಜ್ ಪಾತ್ರ ಇಡೀ ಕಥೆಯ ಮೂಲ. ಈ ಮೂಲ ಮಂತ್ರವೇ ಇಡೀ ಕನ್ನಡಿಗರ ಹೃದಯ ಗೆದ್ದಿತ್ತು. ಚಿತ್ರ ದುಖಾಂತ್ಯವನ್ನೇ ಹೊಂದಿದ್ದರೂ ಕೂಡ, 1971 ರಲ್ಲಿ ಕಸ್ತೂರಿ ನಿವಾಸಕ್ಕೆ ಒಳ್ಳೆ ಹೆಸರು ಬಂತು. ಕೆಲವ್ರು ಇದು ಕಮರ್ಷಿಲಿ ಹಿಟ್ ಆಗಲೇ ಇಲ್ಲ ಅನ್ನೋರು ಇದ್ದಾರೆ. ಇದು ಬಿಟ್ಟು ಹಾಕಿ. ರಾಜ್ ಅಭಿನಯದ ಕಸ್ತೂರಿ ನಿವಾಸ ಮೌಲ್ಯಗಳನ್ನ ಕಟ್ಟಿಕೊಡುತ್ತದೆ. ಪ್ರಾಕ್ಟಿಕಲಿ ಚಿಂತನೆ ಮಾಡೋರಿಗೆ ಇದು ಸರಿ ಬರೋದಿಲ್ಲ. ನಿಜ ಹೇಳಬೇಕಂದ್ರೆ, ಕಸ್ತೂರಿ ನಿವಾಸ ದಲ್ಲಿ ಇರೋದೆಲ್ಲ ಒಳ್ಳೆಯದೇ....
ಕಸ್ತೂರಿ ನಿವಾಸ ಹಾಡುಗಳು ತುಂಬಾ ಚೆಂದ..!
ಕಸ್ತೂರಿ ನಿವಾಸದ ಕತೆಯಷ್ಟೇ ಹಾಡುಗಳು ಸತ್ವಯುತವಾಗಿವೆ. ಎಲ್ಲ ಕಾಲದಲ್ಲೂ ಅನುಕರಣೀಯವಾಗಿರೋ ಪ್ರತಿ ಗೀತೆಗೂ ಬಣ್ಣದ ಸ್ಪರ್ಶ ಜೀವ ತುಂಬಿದಿದೆ. ಆಡಿಸಿ ದಾತಾ ಬೇಸರ ಬೀಡಿ ಹಾಡು ಕಣ್ಣಿಗೆ ಕಟ್ಟುತ್ತದೆ. ‘ಆಡಿಸಿ ನೋಡು..ಬೀಳಿಸಿ ನೋಡು’ ಹಾಡು ಖುಷಿ ಕೊಡುತ್ತದೆ. ಎಲ್ಲೆ ಇರೋ...ಹೇಗೆ ಇರು...ಹಾಡಲ್ಲಿ ಜಯಂತಿ ಅವ್ರು ಅಭಿನಯ ಮನೋಜ್ಷನ. ಸಿನಿಮಾದ ಇನ್ನಿತರ ಹಾಡುಗಳು ಮತ್ತೆ..ಮತ್ತೆ ಕಲರ್ ನಲ್ಲೂ ಕಾಡುತ್ತವೆ...
ರಾಜ್ ಅಭಿಮಾನಿಗಳು ಅಜರಾಮರ...!
ರಾಜ್ ಅಭಿಮಾನಿಗಳು ಎಂದೆದ್ದೂ ಇದ್ದಾರೆ. ಇರುತ್ತಲೇ ಇರುತ್ತಾರೆ. ರಾಜ್ ಸಿನಿಮಾಗಳು ಬೆಳ್ಳಿ ತೆರೆಗೆ ಬರೋದಿಲ್ಲ ಎಂಬೋದು ಬಿಟ್ಟರೇ, ಎಲ್ಲೆಡೆ ರಾಜ್ ಅಭಿಮಾನಿಗಳು ಸಕ್ರಿಯರಾಗಿದ್ದಾರೆ. ಇದು ಕಸ್ತೂರಿ ನಿವಾಸ ತೆರೆಗೆ ಬಂದಾಗ ಮತ್ತೆ..ಮತ್ತೆ ಗೊತ್ತಾಗಿದೆ. ಸುಮಾರು 70 ಥಿಯೇಟರ್ ನಲ್ಲಿ ಕಸ್ತೂರಿ ನಿವಾಸ ತೆರೆಗೆ ಬಂದಿದೆ. ಮೊದಲ ದಿನವೇ ಸೂಪರ್ ಓಪನಿಂಗ್ ಕೂಡ ಸಿಕ್ಕಿದೆ. ಕಲರ್ ಕಸ್ತೂರಿ ನಿವಾಸಕ್ಕೆ ಬಂದಿರೋ ಅಭಿಪ್ರಾಯ ಮೆಚ್ಚೊವಂತದ್ದು..ಅಷ್ಟು ಆಳವಾಗಿಯೇ ಕಸ್ತೂರಿ ನಿವಾಸ ಎಲ್ಲರನ್ನ ಕಾಡಿದೆ....
ಕಸ್ತೂರಿ ನಿವಾಸ ಯಾವಾಗ ಬಂದ್ರೂ ಓಡುತ್ತದೆ ಅನ್ನೋದಕ್ಕೆ ಇದು ಸಾಕ್ಷಿ. ಕ್ಲಾಸಿಕ್ ಸಿನಿಮಾಗಳು ಬರಬೇಕು. ಹಳೇ ಬೇರು ...ಹೊಸ ಚಿಗುರು ಅನ್ನೋ ಥರವೇ, ಈಗೀನ ಯುವಕರಿಗೆ, ಹಳೇ ಸಿನಿಮಾಗಳು ಈ ಥರ ಪರಿಚಯವಾಗಬೇಕು...ಅಲ್ಲವೇ..
-ರೇವನ್ ಪಿ.ಜೇವೂರ್