ಕಾಂತಾರ - ಪ್ರೀತಿಸುವ ಹೃದಯಕ್ಕೆ ಹತ್ತಿರ…!

ಕಾಂತಾರ - ಪ್ರೀತಿಸುವ ಹೃದಯಕ್ಕೆ ಹತ್ತಿರ…!

ಕವನ

ಸಿಂಗಾರ ಸಿರಿ,

ಮುಡಿಗೇರಿದ ಗರಿ,

ಕಾಡಿನ ನಡುವಿನ ಊರ ದಾರಿ,

ಪ್ರಕೃತಿಯನ್ನು ಬಿಗಿದಪ್ಪಿಕೊಳ್ಳುತ್ತಾ ಸಾಗುವ ಪರಿ...

 

ಅಚ್ಚರಿಗಳ ರಾಯಭಾರಿ,

ಅದ್ಧುತಗಳ ಮೇಲೆ ಸವಾರಿ,

ದೈವಾರಾಧನೆಗೆ ಆಭಾರಿ,

 

ನಮ್ಮತನ-ನಮ್ಮ ಜನ,

ನಾವು ಅಂಟಿಕೊಂಡಿರುವ ಈ ಕಾನನ,

ಗುರಿ ಮುಟ್ಟುವ ತನಕ ನಿಲ್ಲದ ಹೋರಾಟಗಳು ವಿಭಿನ್ನ...

 

ಪವಿತ್ರ,

ಆಚಾರ,

ವಿಚಾರ,

ಆಹಾರ,

ವಿಹಾರ,

ಆಶ್ಚರ್ಯಕರ,

ಸಡಗರ,

ಅದ್ಭುತ ಹಾಸ್ಯಗಾರ,

ಅಬ್ಬರ,

ಸಾಗುವ ಭರ,

ತಿರುಗುತ ಗರ-ಗರ,

ದೈತ್ಯಾಕಾರ,

ಘೋರಾತಿಘೋರ,

ನವರಸಗಳ ಆಗರ,

ರಾಯಭಾರ,

ಸಮರ,

ಕಷ್ಟಕರ,

ಮಂತ್ರ-ತಂತ್ರ,

ಯಂತ್ರ,

ಚಿತ್ತಾರ,

ವಿಚಿತ್ರ,

ಮಧುರ,

ಆಡಂಬರ,

ಬಲು ಭಾರ,

ಭೀಕರ,

ವಿಕಾರ,

ಅಪಾಯಕರ,

ಕಂಬನಿಯು ಧಾರಾಕಾರ,

ದು:ಖಕರ,

ವಿನಾಶಕಾರ,

ಸರ್ಕಾರ,

ಆತುರ,

ಕಾತರ,

ಜಾನಪದ ಸೊಗಡಿನ ಸಾರ,

ಹೃದಯಕ್ಕೆ ಹತ್ತಿರ,

ಬಂಗಾರ,

ಶೃಂಗಾರ,

ಅಲಂಕಾರ,

ಉಪಕಾರ,

ನಿರಂತರ,

ಆಹ್ಲಾದಕರ,

ಅಮರ,

ಹೊಳೆವ ನಕ್ಷತ್ರ,

ಬಲು ಎತ್ತರ,

"ಕಾಂತಾರ ಶ್ರೇಷ್ಠ ಅಸ್ತ್ರ"...

 

ಸಂಘರ್ಷಗಳ ಸರಮಾಲೆ,

ಅಭಿಮಾನಿಗಳ ಹರ್ಷೋದ್ಗಾರಗಳು ಮೀರಿದೆ ಎಲ್ಲೆ,

ಪ್ರಯತ್ನಕ್ಕೆ ಫಲ-ದೈವಲೀಲೆ...

-ಶಾಂತಾರಾಮ ಶಿರಸಿ, ಉತ್ತರ ಕನ್ನಡ. 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್