ಕಾಗದದ ದೋಣಿ
ಕವನ
ಲೇಖನಿಯಲ್ಲಿ ತುಂಬಿದ್ದೆ ಪ್ರೀತಿಯ ಪನ್ನೀರು
ಪ್ರತಿ ಪದಗಳಿಗೆ ಜೀವ ನೀನಾಗಿದ್ದೆ
ಪುಟಗಳಲ್ಲಿ ಬರೆದೆ, ಒಡಲಾಳದ ಕವಿತೆ
ಇನ್ನೆಂದು ಅಳಿಸಲಾಗದ ಬಾಂಧವ್ಯದ ರೇಖೆ.
ನೀ ಮುರಿದಿದ್ದೆ ಪ್ರೀತಿಯ ಸರಪಳಿ
ಜನ ಜಾತ್ರೆಯಲ್ಲೂ ಒಂಟಿತನವ ಕಳಿಸಿ.
ಮರೆತು ಹೋದೆಯ ಪ್ರೀತಿ ಪದಗಳು,
ಒಂದಾಗಿರುವ ಆಣೆ ಬಾಷೆಗಳು,
ಬರವಣಿಗೆಯ ಮುಗಿಸದೆಲೆ,
ನಿನ್ನ ಕೈಯಲ್ಲಾಗಾಲೆ ಕಾಗದದ ದೋಣಿ.
ನೆನಪಿನ ಅಲೆಗಳಿಗೆ ತತ್ತರಿಸಿ ಮುಳುಗಿತು ಕಣ್ಣೀರಿನಲ್ಲಿ.
ನಿನಗದು ಆಡುವ ಕಾಗದದ ದೋಣಿ,
ನನಗದು ಕಳೆದು ಹೋದ ನಲುಮೆಯ ಪ್ರೀತಿ.
-ಭೂಷಣ್ ಬೆಂಗಳೂರು