ಕಾಗಿ.....ಕಾಗಿ.....ಕವ್ವ!

ಕಾಗಿ.....ಕಾಗಿ.....ಕವ್ವ!

ಕವನ

            ಇದೊಂದು ಜಾನಪದ ಗೀತೆ/ಪದ್ಯ, ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಪ್ರಚಲಿತವಿರುವ ಗೀತೆ, ಬಹುಶಃ ಉತ್ತರ ಕರ್ನಾಟಕದಲ್ಲಿ ಕೂಡ ಇರಬಹುದು. ಹೊಸದಾಗಿ ಹಬ್ಬ ಆಚರಿಸಲು ಮಾವನ ಮನೆಗೆ ಬರುವ ಅಳಿಯ, ಮಾವನ ಮನೆಯಿಂದ ಉಡುಗೊರೆಗಳನ್ನು ಹೊತ್ತುಕೊಂಡು ಹೋಗುವ ಉದ್ದೇಶದಿಂದ ಬಂದಿರುತ್ತಾನೆ. ಆಗ ಎಷ್ಟೋ ಬಾರಿ ಮಾವನ ಮನೆಗೆ ಅವನು ಬರಿಗೈಯಲ್ಲಿ ಹೋಗುವುದುಂಟು, ಆಗ ಅವನನ್ನು ಛೇಡಿಸುವುದಕ್ಕೆ ಹುಟ್ಟಿಕೊಂಡಿರುವುದು ಈ ಪದ. ನಾಗರೀಕರೆನ್ನಿಸಿಕೊಂಡ ಕೆಲವುರು ಮೂಗು ಮುರಿಯಬಹುದಾದರೂ ಅದರ ಹಿಂದಿರುವ ಹಾಸ್ಯ ಅವರನ್ನು ನಗುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ಹಳ್ಳಿಗಾಡಿನಲ್ಲಿ ನಗರದವರಂತೆ ಅಕ್ಕನ ಗಂಡನನ್ನು ಭಾವ ಎನ್ನುವುದಿಲ್ಲ, ಅವರೆನ್ನುವುದು ಮಾವ. ಆ ಹಾಡು ಈ ರೀತಿಯಿದೆ, ಬೇಕಾದರೆ ನಿಮ್ಮ ಮನೆಗೂ ಬರಿಗೈಯಿಂದ ಬರುವ ಅಳಿಯಂದರಿಗೆ/ಬೀಗರಿಗೆ ಈ ಹಾಡನ್ನು ಅನ್ವಯಿಸಿಕೊಂಡು ಆನಂದಿಸ ಬಹುದು.

ಕಾಗಿ ಕಾಗಿ ಕವ್ವ,

ಯಾರ್ ಬಂದಾರವ್ವ,

ಮಾವ್ ಬಂದಾನವ್ವ,

ಮಾವೇನ್ ತಂದಾನವ್ವ,

ಹಂಡೆದಂಥ ಕುಂಡಿ ಇಟ್ಗಂಡ್  ಹಂಗೆ ಬಂದನವ್ವ,

ಮಾವ್ಗೇನ್..............ಊಟ?

ಬೀಸಕಲ್ಲಿನ್...........ಗೂಟ!!

Comments