ಕಾಡದಿರು ಹೆಮ್ಮಾರಿ

ಕಾಡದಿರು ಹೆಮ್ಮಾರಿ

ಕವನ

ತಂದಾನಿ ತಾನೋ ತಾನಿ ತಂದಾನೋ ತಂದಾನಿ ತಾನೋ ತಂದಾನೋ/ತಂದಾನಿ ತಾನೋ ತಂದಾನೋ//

ಕಾಡದಿರು ಹೆಮ್ಮಾರಿ ಘೋರ ರೂಪಿನ ಪೋರಿ/ಹೋಗು ಹೋಗೆಲೆ  ಕರುಣೆಯಿಲ್ಲದ ಅಣುವೇ/ಚಿನ್ನಾರಿ/ಚಿಗುರು ಹಣ್ಣೆಲೆ  ಕೊಂದುಬಿಟ್ಯಲ್ಲೇ//

ವರುಷಕೊಮ್ಮೆ ಯಾಕ್ ಬರುವೆ ನೀನು/ಕರೆಯಾದೆ ಬರುವ ಅತಿಥಿಯೇನೋ/ರಕ್ಕಸಿಯೇ/ಬ್ಯಾನೆ ಬ್ಯಾಸ್ರಿಕೆ ತರುವೆಯೇನೋ//

ಗುಬ್ಬಿ ಮ್ಯಾಲೆ ಬ್ರಹ್ಮಾಸ್ತ್ರ ಯಾತಕ್ಕೆ/ನಾವು ಗೈಯ್ದ ಪಾಪ ಕಾಡಿತ್ತೇನೋ/ಜೀವರ/

ದ್ಯಾವ ಭಗ್ ವಂತ ಕಾಪಾಡು//

ಮುಖಗವುಸು ಹಾಕೋಣ ಕೈಸ್ವಚ್ಛ ಮಾಡೋಣ/ ಅಂತ್ರ ಕಾಪಾಡ್ಕೊಂಡು ನಿಲ್ಲೋಣ/  ನಾವೆಲ್ಲ/ಬಿಸಿಬಿಸಿ ಆಹಾರ ತಿನ್ನೋಣ//

ಆಸ್ತಿ ಪಾಸ್ತಿ ಒಡವೆ ವಸ್ತ್ರ ಹೋಗ್ಲಿ/ಬದುಕಿದ್ರೆ ಬೇಡಿ ತಿನ್ನೋಣ/ತಮ್ಮಯ್ಯಾ/ನಮಗಿಂದು ಜೀವವೇ ಮುಖ್ಯ ಕಣಣ್ಣಾ//

ಉಂಡಾಡಿಯಂತೆ ಸುತ್ತದಿರು ತಮ್ಮಯ್ಯಾ/ಮನೇಲೇ ಕುಂತಿರು ಹೊರ್ಗಡೆ ಹೋಗದಿರು/ಜೀವ/ಮುಖ್ಯ ನೋಡು ಅಡ್ಡಾಡದಿರು//

ಮನೆಯ ಹಿರಿ ಕಿರಿಯರು /ನಮ್ಮಗಳ ಆಸ್ತಿ/ಜೋಪಾನವಾಗಿ ನೋಡ್ಬೇಕು/ತಂಗವ್ವಾ/ಅವುರೇ ಕಣಮ್ಮಿ ನಮ್ ದೇವ್ರು//

ಎಲ್ಲರೂ ಸೇರ್ಕೊಂಡು ಹೊಂದಾಣ್ಕೆ ಮಾಡ್ಕೊಂಡು/ಇದ್ದುದರಲ್ಲಿಯೇ ತೃಪ್ತಿ ಪಟ್ಕೊಂಡು/ಎಲೆ ಮನುಜ

/ಕೊರೋನಾ ಓಡ್ಸೋಣ  ಕಾಡದಂತೆ//ತಂದಾನಿ//

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಅಂತರ್ಜಾಲ

 

ಚಿತ್ರ್