ಕಾಡುವ ಮೌನ
ಕವನ
ಕಡಲ ಒಡಲಲ್ಲಿರೋದು ದಿವ್ಯ ಮೌನ
ಗಗನದ ಮಡಿಲಲ್ಲಿರೋದು ಗಾಢ ಮೌನ
ಕಡಲಿನ ಮೌನ ಅಲೆಗಳಾದರೆ...
ಗಗನದ ಮೌನ ಸೋನೆ ಮಳೆಯಾಯಿತು...
ಕೊನೆಗೂ ಕಡಲು, ಗಗನ ಒಂದಾಯಿತು
ಕಾಡುವ ಮೌನಕೆ ವಿದಾಯ ಹೇಳಿತು
ಇವೆಲ್ಲವನ್ನೂ ನೋಡುತ್ತಿದ್ದ ನನ್ನ ಮನ ಭಾರವಾಯಿತು
ಒತ್ತರಿಸಿಕೊಂಡು ಬರುವ ನಿನ್ನ ನೆನಪು
ಮನದ ಪುಟದ ಮೇಲೆ ಕಣ್ಣೀರಿನ ಮೋಡ ಕಟ್ಟಿತು
ಕಣ್ಣ ಹನಿ ಚಿಪ್ಪಿನೊಳಗೆ ಬಿದ್ದು ಮುತ್ತಾಗುವುದೋ...
ಕಡಲ ಒಡಲ ಸೇರಿ ಉಪ್ಪಾಗುವುದೋ ತಿಳಿಯದು...
Comments
ಉ: ಕಾಡುವ ಮೌನ
In reply to ಉ: ಕಾಡುವ ಮೌನ by Saranga
ಉ: ಕಾಡುವ ಮೌನ
ಉ: ಕಾಡುವ ಮೌನ
In reply to ಉ: ಕಾಡುವ ಮೌನ by ಉಮೇಶ ಮುಂಡಳ್ಳಿ …
ಉ: ಕಾಡುವ ಮೌನ