ಕಾಣುವ ದೇವರು

ಕಾಣುವ ದೇವರು

ಕವನ

ತರಗತಿ ಮುಗಿಯಿತು ಶಾಲೆಯು ಬಿಟ್ಟಿತು

ನಡೆಯುತ ಸೇರಿದೆ ಮನೆಯನ್ನು

ಗುರುಗಳು ಕಲಿಸಿದ ಪಾಠವ ಓದಿದೆ

ಬರೆಯುತ ಕಲಿತೆನು ಪಾಠವನು

 

ಶಾಲೆ ಪರೀಕ್ಷೆಯ ಅಂಕವ ತೋರಲು

ಅಮ್ಮನು ನೀಡಿದ ಸಿಹಿ ಮುತ್ತು

ಮಮತೆಯ ತೋರುತ ಮಡಿಲಲಿ ಕೂರಿಸಿ 

ತಾಯಿಯು ಕೊಟ್ಟಳು ಕೈತುತ್ತು

 

ನನ್ನಯ ಗೆಲುವಿನ ವಿಷಯವನರಿತರೆ

ಅಮ್ಮನು ಸಂತಸಗೊಳ್ಳುವಳು

ನೋವಲಿ ಅಳುತಿರೆ ತಕ್ಷಣ ಬರುವಳು

ತಾನೂ ಕಂಬನಿಗರೆಯುವಳು

 

ಅಮ್ಮನು ಅಪ್ಪನು ಕಾಣುವ ದೇವರು

ತೋರುವ ಅವರಲಿ ಭಕ್ತಿಯನು

ಅನುದಿನ ಚರಣಕೆ ವಂದಿನೆ ಸಲ್ಲಿಸೆ

ಹರಸುವರವರು ನಮ್ಮನ್ನು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್