ಕಾತರ By girish.shetty on Tue, 11/27/2007 - 15:37 ಬರಹ ನಿನ್ನ ನೋಡುವ ಕಾತರದಲಿ ಉಳಿದ ದಿನಗಳ ಕಳೆದು ಕೂಡಿಸಿದೆ ಗುಣಿಸಿ ಭಾಗಿಸಿದೆ ತಪ್ಪು ಲೆಕ್ಕಗಳ ಬರೆವ ಪುಟ್ಟ ಹುಡುಗನ ಹಾಗೆ ಏನು ಮಾಡಿದರೇನು ಮತ್ತದೆ ಹಿಡಿಸದ ಅಂಕೆ ದಿನಗಳೆದರೂ ದಿನಗಳು ಓಡುತಿಲ್ಲವೆಂಬ ಶಂಕೆ