ಕಾತರ

ಕಾತರ

ಬರಹ

ನಿನ್ನ ನೋಡುವ ಕಾತರದಲಿ
ಉಳಿದ ದಿನಗಳ
ಕಳೆದು ಕೂಡಿಸಿದೆ
ಗುಣಿಸಿ ಭಾಗಿಸಿದೆ
ತಪ್ಪು ಲೆಕ್ಕಗಳ
ಬರೆವ ಪುಟ್ಟ
ಹುಡುಗನ ಹಾಗೆ

ಏನು ಮಾಡಿದರೇನು
ಮತ್ತದೆ ಹಿಡಿಸದ
ಅಂಕೆ
ದಿನಗಳೆದರೂ
ದಿನಗಳು
ಓಡುತಿಲ್ಲವೆಂಬ
ಶಂಕೆ